ಕೆ.ಆರ್. ಪೇಟೆ : ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಭೋರಾಲಿಂಗೇಗೌಡರ ಜಮೀನಿನಲ್ಲಿ ಇಡಲಾಗಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ನಡೆದಿದೆ.ಕೆಲವು ದಿನಗಳಿಂದ ಜಮೀನುಗಳ ಬಳಿ ಚಿರತೆ ಕಾಣಿಸಿಕೊಳ್ಳುತ್ತಿದ್ದ ಕಾರಣ ಗ್ರಾಮಸ್ಥರು ಭಯಭೀತರಾಗಿದ್ದರು. ಬೋನಿಗೆ ಚಿರತೆ ಬಿದ್ದ ವಿಚಾರ ತಿಳಿದ ಕೂಡಲೇ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಕೊಂಡೊಯ್ದಿದ್ದಾರೆ. ಈ ಮೂಲಕ ಗ್ರಾಮದಲ್ಲಿ ಭಯದ ವಾತಾವರಣದ ನಡುವೆ ಶಾಂತಿ ಮರಳಿ ಬಂದಿದೆ.