ಕ್ರಿಕೆಟ್ ಅಭಿಮಾನಿಗಳು (Cricket Fans) ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ನಾಳೆಯಿಂದ ಏಷ್ಯಾ ಕಪ್ (Asia Cup) ಟೂರ್ನಿ ಭರ್ಜರಿಯಾಗಿ ಆರಂಭಗೊಳ್ಳುತ್ತಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್ ಕಾಂಗ್, ಒಮಾನ್, ಯುಎಇ ತಂಡಗಳು ತನ್ನ ಶಕ್ತಿಯನ್ನು ತೋರಿಸಲು ಸಜ್ಜಾಗಿದೆ.
ಒಂದೆಡೆ ಭಾರತ ತನ್ನ ಶ್ರೇಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಶಕ್ತಿಯನ್ನು ತೋರಿಸಲು ನಿರೀಕ್ಷೆಯಿದೆ. ಪಾಕಿಸ್ತಾನ ತನ್ನ ಪೇಸ್ ದಾಳಿಯೊಂದಿಗೆ ಮೈದಾನದಲ್ಲಿ ಅಬ್ಬರಿಸಲು ಸಿದ್ಧವಾಗಿದೆ. ಇನ್ನೊಂದೆಡೆ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ತಂಡಗಳು ಟ್ರೋಫಿ ಗೆಲ್ಲುವ ತವಕದಲ್ಲಿದೆ. ಈ ಟೂರ್ನಿಯನ್ನು ಭಾರತ ಆಯೋಜಿಸಲಿದ್ದು, ಟಿ20 ಫಾರ್ಮೆಟ್‌ನಲ್ಲಿ ನಡೆಸಲಾಗುತ್ತಿದೆ. ಸೆ.9 ರಿಂದ ಯುಎಇನಲ್ಲಿ ಈ ಟೂರ್ನಿ ಆರಂಭವಾಗಿದೆ. ಭಾರತ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಸೆ.10 ರಂದು ಆರಂಭಿಸಲಿದೆ.
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಫೈಟ್ ಸೆ.14 ರಂದು ನಡೆಯಲಿದೆ. ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಇದಾದ ಬಳಿಕ ಲೀಗ್‌ನಲ್ಲಿ 2 ಪಂದ್ಯ ಗೆದ್ದ ತಂಡವು ಸೂಪರ್ 4 ಹಂತಕ್ಕೆ ತಲುಪಲಿದೆ. ಫೈನಲ್ ಪಂದ್ಯವು ಸೆಪ್ಟೆಂಬರ್ 28ರಂದು ದುಬೈ ನಲ್ಲಿ ನಡೆಯಲಿದೆ.ಲೀಗ್ ಹಂತದಲ್ಲಿ 4 ತಂಡಗಳು ಇರಲಿದ್ದು, ಇದರಲ್ಲಿ 2 ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಸೂಪರ್ 4 ಹಂತಕ್ಕೆ ತಲುಪಲಿದೆ. ಆದರೆ ಸೂಪರ್ 4 ಹಂತಕ್ಕೆ ತಲುಪಿದ ಮೇಲೆ ಯಾವುದೇ ಗುಂಪುಗಳು ಇರುವುದಿಲ್ಲ. ಬದಲಿಗೆ 4 ತಂಡಗಳಲ್ಲಿ ಪ್ರತಿ ತಂಡ ಸಹ ಉಳಿದ 3 ತಂಡಗಳ ವಿರುದ್ಧ ಸೆಣಸಾಡಲೇಬೇಕು. ಫೈನಲ್ ಪಂದ್ಯಗಳು ಇರುವುದಿಲ್ಲ. ಹೀಗಾಗಿ ಆಡಿದ 3 ಸೂಪರ್ 4 ಪಂದ್ಯಗಳಲ್ಲಿ ಯಾವ 2 ತಂಡಗಳು ಟಾಪ್ 1 & 2 ನೇ ಸ್ಥಾನದಲ್ಲಿ ಇರುತ್ತದೆಯೋ ಆ ಎರಡು ತಂಡಗಳು ಫೈನಲ್ ಗೆ ಪ್ರವೇಶ ಪಡೆಯಲಿದೆ.