Home ನಿಧನ ಸುದ್ದಿ ಅಂಗವಿಕಲ ಮಕ್ಕಳೊಂದಿಗೆ ತಾಯಿ ಆತ್ಮ*ಹತ್ಯೆ; ತುಮಕೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ

ಅಂಗವಿಕಲ ಮಕ್ಕಳೊಂದಿಗೆ ತಾಯಿ ಆತ್ಮ*ಹತ್ಯೆ; ತುಮಕೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ

0

ತುಮಕೂರಿನಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಅಂಗವಿಕಲ ಮಕ್ಕಳ ಜತೆ ಆತ್ಮಹತ್ಯೆಗೆ ಶರಣಾಗಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರಾಥಮಿಕ ಹಂತದಲ್ಲಿ ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಆದರೆ ಮಕ್ಕಳ ಅಂಗವಿಕಲತೆಗೆ ನಾನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ತಾಯಿ ವಿಜಯಲಕ್ಷ್ಮೀ(45), ಮಗಳು ಚೂಡಾಮಣಿ(23), ಪುತ್ರ ನರಸಿಂಹರಾಜು(14) ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಠಾಣೆ ಪೊಲೀಸರ ಭೇಟಿ ತನಿಖೆ ಕೈಗೊಂಡಿದ್ದಾರೆ. ಪತಿ ಮಹದೇವಯ್ಯ ಮನೆಯಲ್ಲಿ ಇಲ್ಲದಿದ್ದಾಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಮಕ್ಕಳ ಅಂಗವಿಕಲರಾಗಿರುವ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

You cannot copy content of this page

Exit mobile version