ಬೇಲೂರು : ಕಾಡಾನೆ ಭೀಮನ ಸೌಮ್ಯತೆ ನೋಡಿ!.. ದಾರಿಯಲ್ಲಿ ಎದುರಿಗೆ ನಿಂತಿದ್ದ ಹಸುವನ್ನು ಕಂಡು ಮೌನವಾದ ಭೀಮ! ಹಸು ದಾಟಿದ ಮೇಲೆ ಮುಂದೆ ಸಾಗಿದ ಭೀಮ! ಮೊಬೈಲ್ ನಲ್ಲಿ ಸೆರೆಯಾದ ದೃಶ್ಯ ಇದೀಗ ಎಲ್ಲೆಡೆ ವೈರಲ್! ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ಕಂಡು ಬಂದ ದೃಶ್ಯ!
ಮರ ಉರುಳಿಸಿ ರಸ್ತೆ ದಾಟಲು ವಿಫಲನಾದನೆ ಭೀಮ!
ಸೋಲಾರ್ ವಿದ್ಯುತ್ ಬೇಲಿ ತುಂಡರಿಸಲು ಕಾಡಾನೆ ಸಂಚು!
ಅರೆಹಳ್ಳಿ: ಭೀಮನ ಸೌಮ್ಯುತೆ ಕಂಡು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಮಾತುಗಎಳು ಕೇಳಿ ಬಂದಿದೆ. ಅರೇಹಳ್ಳಿ ಭಾಗದಲ್ಲಿ ಭೀಮ ಕಾಡಾನೆ ಸೌಮ್ಯತೆಯಿಂದ ನಡೆದುಕೊಂಡು ಹೋಗುವಾಗ ಎದುರಿಗೆ ಹಸುವೊಂದು ದಾರಿಯಲ್ಲಿ ಸಿಕ್ಕಿದ್ದು ಅದು ಅಲ್ಲಿಂದ ತೆರಳಿದ ನಂತರ ಯಾವುದೇ ಗಲಭೆ ಗದ್ದಲ ಇಲ್ಲದೆ ಭೀಮ ಆನೆ ಸ್ಥಳದಿಂದ ತೆರಳಿದೆ.ಆದರೆ ಬೇಜಾರು ವಿಷಯ ಏನೆಂದರೆ ಭೀಮನ ಒಂದು ದಂತ ಮುರಿದಿರುವುದು.ಮತ್ತೊಂದೆಡೆ ಮಲೆನಾಡು ಪ್ರದೇಶವಾದ ಬೇಲೂರು ತಾಲೂಕಿನ ಅರೆಹಳ್ಳಿ ಹಾಗೂ ಬಿಕ್ಕೋಡು ಭಾಗದ ಸುತ್ತಮುತ್ತಲಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ವಿಪರೀತ ವಾಗುತ್ತಿದ್ದಂತೆ ಹಲವು ಕೃಷಿಕ - ಬೆಳೆಗಾರರು ಸೋಲಾರ್ ವಿದ್ಯುತ್ ಬೇಲಿಯನ್ನು ಅಳವಡಿಸುವತ್ತ ದಾಪುಗಾಲು ಇಟ್ಟಿದ್ದು ಅದರ ಪರಿಣಾಮವಾಗಿ ಭಾಗಶಃ ಕಾಡಾನೆಗಳು ಸೋಲಾರ್ ಬೇಲಿಯನ್ನು ಕಂಡೊಡನೆ ದೂರ ಸರಿಯಲು ಪ್ರಯತ್ನಿಸುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ! ಆದರೆ ಕೆಲವೊಮ್ಮೆ ಹಲವು ಕಾಡಾನೆಗಳು ತನ್ನ ಚತುರತೆಯನ್ನು ಪ್ರದರ್ಶಿಸಿಸಿ ಸೋಲಾರ್ ಬೇಲಿಗೆ ಮರ ಉರುಳಿಸಿ ಮುಂದೆ ದಾಟುತ್ತವೆ ಎಂಬುವುದು ಹಲವರ ಅಭಿಪ್ರಾಯವಾಗಿದೆ .
ಅದಕ್ಕೆ ಸಾಕ್ಷಿವೆಂಬಂತೆ ಇಂದು ಬೆಳಿಗ್ಗೆ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಕಡೇಗರ್ಜೆ ಗ್ರಾಮದ ಸಮೀಪ ಮೊಬೈಲ್ನಲ್ಲಿ ಸೆರೆಯಾದ ದೃಶ್ಯವೇ ಸಾಕ್ಷಿ. ಹೌದು ಕಡೇಗರ್ಜೆ ಗ್ರಾಮದ ಸಮೀಪ ವಿರುವ ಗುಡ್ ಪೇಟಾ ಎಸ್ಟೇಟೀನ ಒಳಗೆ ತಡರಾತ್ರಿ* ಅಚಾನಕ್ಕಾಗಿ ವಿದ್ಯುತ್ ಸಂಪರ್ಕ ಕಡಿತವಿರುವ* ದಾರಿಯನ್ನು ಗಮನಿಸಿ ಒಳ ಪ್ರವೇಶಿಸಿದ ಭೀಮ ಕಾಡಾನೆಯು ಇಂದು ಮುಂಜಾನೆ ಪಕ್ಕದ ತೋಟಕ್ಕೆ ದಾಟಲು ಮುಂದಾಗಿದೆ! ಆದರೆ ಆ ಸಂದರ್ಭದಲ್ಲಿ ಸೋಲಾರ್ ವಿದ್ಯುತ್ ಬೇಲಿಯಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದನ್ನು ಮನಗಂಡ ಭೀಮ ಕಾಡಾನೆಯು ಪಕ್ಕದಲ್ಲಿಯೇ ಇದ್ದ ಹಸಿ ಮರವನ್ನು ಉರುಳಿಸಲು ಪ್ರಯತ್ನ ಪಟ್ಟಿದ್ದು ವಿದ್ಯುತ್ ಶಾಕ್ ಹೊಡೆದ ಬಳಿಕ ಅಲ್ಲಿಂದ ಬೇರೆಡೆ ತೆರಳಿದೆ, ಈ ದೃಶ್ಯವನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರೋರ್ವರು ತನ್ನ ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರ
ಸ್ಥಳೀಯವಾಗಿ ಸಾಕಷ್ಟು ಫೇಮಸ್ ಆಗಿರೋ ಕಾಡಾನೆ ಭೀಮನ ಚಲನವಲನದ ಬಗ್ಗೆ ಆಗಿಂದಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಫಾಲೋವರ್ಸ್ ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದರೆ ತಪ್ಪಾಗಲಾರದು.
