Home ದೇಶ ಮಣಿಪುರದಲ್ಲಿ ಹಲವು ಮನೆಗಳು ಸುಟ್ಟು ಭಸ್ಮ; ಗಡಿ ದಾಟಿ ಬೆಂಕಿ ನಂದಿಸಿದ ಮ್ಯಾನ್ಮಾರ್ ಅಗ್ನಿಶಾಮಕ ಸಿಬ್ಬಂದಿ

ಮಣಿಪುರದಲ್ಲಿ ಹಲವು ಮನೆಗಳು ಸುಟ್ಟು ಭಸ್ಮ; ಗಡಿ ದಾಟಿ ಬೆಂಕಿ ನಂದಿಸಿದ ಮ್ಯಾನ್ಮಾರ್ ಅಗ್ನಿಶಾಮಕ ಸಿಬ್ಬಂದಿ

0

ಇಂಫಾಲ್: ಗಡಿ ಪ್ರದೇಶದಲ್ಲಿ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಹೆಚ್ಚು ವ್ಯಾಪಿಸಿದ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಯಿತು. ಈ ಸಂದರ್ಭದಲ್ಲಿ ಮ್ಯಾನ್ಮಾರ್‌ನ ಅಗ್ನಿಶಾಮಕ ಸಿಬ್ಬಂದಿ ಗಡಿ ದಾಟಿ ಬಂದು ಬೆಂಕಿ ನಂದಿಸಲು ಸಹಕರಿಸಿದರು. (Myanmar firefighters cross border)

ಭಾರತ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯ ಮೋರೆ ನಗರದಲ್ಲಿ ಈ ಘಟನೆ ಸಂಭವಿಸಿದೆ. ಶನಿವಾರದಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಭಾರೀ ಅಗ್ನಿ ಅವಘಡ ಸಂಭವಿಸಿ, ಮುಸ್ಲಿಂ ಬಸ್ತಿಯಲ್ಲಿನ ಹತ್ತು ಮನೆಗಳು ಸುಟ್ಟು ಹೋಗಿವೆ. ದಟ್ಟವಾದ ಬೆಂಕಿ ಮತ್ತು ಹೊಗೆ ಎಲ್ಲೆಡೆ ವ್ಯಾಪಿಸಿತ್ತು.

ಮಣಿಪುರ ರಾಜ್ಯದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಕಮಾಂಡೋಗಳು ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದರು. ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಬೆಂಕಿ ಮತ್ತಷ್ಟು ಹೆಚ್ಚುತ್ತಿರುವುದನ್ನು ಗಮನಿಸಿದ ಮ್ಯಾನ್ಮಾರ್‌ನ ಅಗ್ನಿಶಾಮಕ ದಳದ ಸಿಬ್ಬಂದಿ, ತಮ್ಮ ವಾಹನಗಳೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಮೋರೆಗೆ ಬಂದರು. ಅವರು ಸುಟ್ಟುಹೋಗುತ್ತಿದ್ದ ಮನೆಗಳ ಬೆಂಕಿಯನ್ನು ನಿಯಂತ್ರಿಸಲು ಸಹಕರಿಸಿದರು.

ಮ್ಯಾನ್ಮಾರ್ ಅಗ್ನಿಶಾಮಕ ಸಿಬ್ಬಂದಿಯ ಸಹಕಾರವನ್ನು ಮಣಿಪುರದ ಪೊಲೀಸ್ ಅಧಿಕಾರಿಯೊಬ್ಬರು ಶ್ಲಾಘಿಸಿದ್ದಾರೆ. ಆ ದೇಶದ ಫೈರ್ ತಂಡಗಳು ಸಮಯಕ್ಕೆ ಸರಿಯಾಗಿ ತಲುಪದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿತ್ತು ಎಂದು ಅವರು ಹೇಳಿದರು. ಹೀಗೆ ಹಠಾತ್ತನೆ ಗಡಿ ದಾಟಿ ಸಹಕರಿಸುವುದು ಅಪರೂಪದ ಘಟನೆ ಎಂದು ಅವರು ಬಣ್ಣಿಸಿದರು. ಅಗ್ನಿ ದುರಂತದಲ್ಲಿ ಸಿಲುಕಿದವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಈ ಭಾರೀ ಅಗ್ನಿ ಅವಘಡದ ಕುರಿತು ತನಿಖೆ ನಡೆಯುತ್ತಿದ್ದು, ಆಸ್ತಿ ನಷ್ಟವನ್ನು ಅಂದಾಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಂಡೋ-ಮ್ಯಾನ್ಮಾರ್ ಸ್ನೇಹ ದ್ವಾರದ (Indo-Myanmar Friendship Gate) ಬಳಿ ಇರುವ ಮೋರೆ ನಗರವು ಎರಡೂ ದೇಶಗಳ ನಡುವಿನ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಆದರೆ, ಕರೋನಾ ಸಾಂಕ್ರಾಮಿಕ ಮತ್ತು ಮ್ಯಾನ್ಮಾರ್‌ನಲ್ಲಿನ ಅಶಾಂತಿಯ ಕಾರಣದಿಂದಾಗಿ 2020ರ ಮಾರ್ಚ್‌ನಿಂದ ಅಲ್ಲಿನ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ.

You cannot copy content of this page

Exit mobile version