ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿದಿದೆ. ಈ ಬಗ್ಗೆ ಸ್ಯಾಂಡಲ್ವುಡ್ನ ನಿರ್ದೇಶಕರ ನಾಗತಿಹಳ್ಳಿ ಚಂದ್ರಶೇಖರ್, ತಬ್ಭಿ ಜಾತಿಗಳ ಯೋಗ್ಯ ನಾಯಕರಿಗೆ ಸೂಕ್ತ ಜಾಗ ಕೊಡಿ ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದರೆ ಬಿಜೆಪಿ ಪಕ್ಷವು 66 ಕ್ಷೇತ್ರಗಳಲ್ಲಷ್ಟೆ ಗೆಲ್ಲಲು ಶಕ್ತವಾಗಿದೆ. ಇದೀಗ ಹೊಸ ಸರ್ಕಾರ ಅಧಿಕಾರವಹಿಸಿಕೊಳ್ಳಲು ಸಜ್ಜಾಗಿರುವ ವೇಳೆಯಲ್ಲಿ ಸ್ಯಾಂಡಲ್ವುಡ್ನ ನಿರ್ದೇಶಕ ನಾಗತಿಹಳ್ಳಿ ಕಾಂಗ್ರೆಸ್ ಗೆ ತಿಳಿ ಹೇಳಿದ್ದಾರೆ.
ಈಗ ಇಷ್ಟು. ಗೆದ್ದವರು ಬೀಗಬೇಡಿ. ಎಲ್ಲರನ್ನೂ ಒಳಗೊಳ್ಳಿ. ದ್ವೇಷ ಬೇಡ. ತಬ್ಭಲಿ ಜಾತಿಗಳ ಯೋಗ್ಯ ನಾಯಕರಿಗೆ ಸೂಕ್ತ ಜಾಗ ಕೊಡಿ. ಬ್ರಾಹ್ಮಣ, ವಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಮೇಲಿನವರನ್ನು ಅಧಿಕಾರದಿಂದ ದೂರವಿಡಿ. ಕನಿಷ್ಠ 10% ಭ್ರಷ್ಟಾಚಾರದಿಂದಲಾದರೂ ದೂರವಿರಿ. ಸೋತವರು ಆತ್ಮಾವಲೋಕನ ಮಾಡಿಕೊಳ್ಳಿ. ಗೆದ್ದವರು ಭಯಂಕರ ವಿನಯವಂತರಾಗಿರಿ” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.