Home ರಾಜ್ಯ ನಮ್ಮ ನಡಿಗೆ ಶಾಲೆಯ ಕಡೆಗೆ: ಸ್ಲಂ ಜನಾಂದೋಲನ ಕರ್ನಾಟಕದಿಂದ ಜಾಗೃತಿ ಅಭಿಯಾನ

ನಮ್ಮ ನಡಿಗೆ ಶಾಲೆಯ ಕಡೆಗೆ: ಸ್ಲಂ ಜನಾಂದೋಲನ ಕರ್ನಾಟಕದಿಂದ ಜಾಗೃತಿ ಅಭಿಯಾನ

0

ಕರೋನಾ ನಂತರದ ದಿನಗಳಲ್ಲಿ ಸ್ಲಂಗಳಲ್ಲಿ ಬಹುಪಾಲು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಸ್ಲಂ ಜನಾಂದೋಲನ ಕರ್ನಾಟಕದಿಂದ ಜಾಗೃತಿ ಅಭಿಯಾನ ಸಂಘಟನೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಯತ್ತ ಕರೆತರುವುದಕ್ಕಾಗಿ ʼನಮ್ಮ ನಡಿಗೆ ಶಾಲೆಯ ಕಡೆಗೆʼ ಎನ್ನುವ ಅಭಿಯಾನವನ್ನು ಹಮ್ಮಿಕೊಂಡಿತ್ತು. ಅದರ ಪೂರ್ಣ ವರದಿ ಇಲ್ಲಿದೆ.

ರಾಜ್ಯದ ಅನೇಕ ಭಾಗಗಳಿಂದ ಬೆಂಗಳೂರು ನಗರಕ್ಕೆ ಜೀವನ‌ಕಟ್ಟಿಕೊಳ್ಳಲು ಬಂದ ಜನರು, ಸ್ಥಳೀಯವಾಗಿ ಕಟ್ಟಡ ಕಾರ್ಮಿಕರಾಗಿ, ಗುತ್ತಿಗೆ ಪೌರಕಾರ್ಮಿಕರಾಗಿ, ಹೊಟೇಲ್ಲುಗಳಲ್ಲಿ ಸ್ವಚ್ಛ ಮಾಡುವವರಾಗಿ, ಒಟ್ಟಾರೆ ಅಸಂಘಟಿತ ಕಾರ್ಮಿಕರಾಗಿ ಜೀವನ‌‌ ನಡೆಸುತ್ತಿದ್ದರು.

ದಿಢೀರ್ ಎಂದು ಅಪ್ಪಳಿಸಿದ ಕರೋನಾ‌ ಮಹಾಮಾರಿಯಿಂದಾಗಿ ಇವರ ಬದುಕು ಅತಂತ್ರವಾಯಿತು. ಎಷ್ಟೇ ಕಷ್ಟವಿದ್ದರೂ ಸಹ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಿದ್ದರು. ಆದರೆ ಕರೋನಾದಿಂದಾಗಿ ಕೆಲಸಗಳಿಲ್ಲದೇ ಜೀವನ ಸಾಗಿಸುವುದೇ ದುಸ್ತರವಾದಾಗ‌ ಸಹಜವಾಗಿ‌ ಇವರ ಮಕ್ಕಳೂ ಕೂಡಾ ಶಿಕ್ಷಣದಿಂದ ಹೊರಗುಳಿದು ಪೋಷಕರ ಜೊತೆ ದುಡಿಮೆಗೆ ಬೆನ್ನೆಲುಬಾಗಿ ನಿಂತರು.

 ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿದಾಗ ಈ ಅಂಶವನ್ನು ಗಮನಿಸಿದ ಸಂಘಟನೆಯ ಕಾರ್ಯಕರ್ತರು ಪೋಷಕರ ಜೊತೆ ಮಾತನಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ದುಂಬಾಲು ಬಿದ್ದರು.

 ಕರೋನಾ ಮುಂಚೆ ಇದ್ದ ಕೆಲಸಗಳು ಈಗ ಇಲ್ಲಾ, ವಾರದಲ್ಲಿ ಎರಡು ಮೂರು ದಿನಗಳು ಮಾತ್ರ ಕೆಲಸಗಳು ಸಿಗುತ್ತವೆ, ಅದರಲ್ಲಿ ಬಂದ ಕೂಲೊಯಿಂದ ನಮ್ಮ‌ ಮನೆಯನ್ನು ನಡೆಸಲು ಕಷ್ಟವಾಗುತ್ತಿದೆ, ಮಕ್ಕಳೂ ಸಹ ನಮಗೆ ಅಷ್ಟೋ ಇಷ್ಟೋ ದುಡಿದು ಜೀವನ ನಡೆಸಲು ಸಹಕಾರಿಯಾಗಿದ್ದಾರೆ ಎಂಬ ಉತ್ತರ ಪೋಷಕರಿಂದ ಬರುತ್ತಿದೆ.

ಅಲ್ಲದೇ ಕರೋನಾ ಸಮಯದಲ್ಲಿ ಸರ್ಕಾರ ಜನರಿಗೆ ಕರೋನಾ ಪ್ಯಾಕೇಜ್ ಘೋಷಣೆ ಮಾಡಿತು, ಆದರೆ ಅದನ್ನು ಪಡೆಯಲು ಬೇಕಾದ ಸಮರ್ಪಕ ದಾಖಲೆಗಳು ಇಲ್ಲದ ಕಾರಣ ಸಾಕಷ್ಟು ಸ್ಲಂ‌-ಜನರು ವಂಚಿತರಾಗಿರುವುದೂ ಸಹ ಅಧ್ಯಯನದಲ್ಲಿ ಕಂಡುಬಂದಿದೆ.

ಈ ಎಲ್ಲಾ ಅಂಶಗಳ ಆಧಾರದ ಮೇಲೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಸ್ಥಳೀಯ ಸರ್ಕಾರಿ ಶಾಲೆಯ ಟೀಚರ್ಸ್ ಮತ್ತು ಮಕ್ಕಳ ಸಹಕಾರದೊಂದಿಗೆ ಜಾಗೃತಿ ಅಭಿಯಾನಕ್ಕೆ ಮುಂದಾಗಲಾಯಿತು.

ಉಲ್ಲಾಳು ಉಪನಗರದಲ್ಲಿನ ಅಂಬೇಡ್ಕರ್ ನಗರ, ನ್ಯೂ ಕಾಲೋನಿಲ್ಲಿ ನಮ್ಮ ನಡಿಗೆ ಶಾಲೆಯ ಕಡೆಗೆ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳನ್ನಾಗಿ ಮಾಡಿ ಅಂಬೇಡ್ಕರ್ ನಗರ, ನ್ಯೂ ಕಾಲೋನಿ ಮತ್ತು ವೆಂಕಟಪ್ಪ ಕಾಲೋನಿಯಲ್ಲಿ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ, ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಮಕ್ಕಳ ವಿಕಾಸಕ್ಕೆ ಸಮುದಾಯ ಮುಂದಾಗಲಿ, ಶಿಲ್ಷಣವೇ ಶಕ್ತಿ, ಉಚಿತ ಶಿಕ್ಷಣ ನಮ್ಮ ಹಕ್ಕು ಎಂಬ ಘೋಷಣೆಗಳೊಂದಿಗೆ ಪೋಷಕರಿಗೆ ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು.

(ವರದಿ: ಕೆಂಪರಾಜ ವಿ.)

You cannot copy content of this page

Exit mobile version