Friday, April 26, 2024

ಸತ್ಯ | ನ್ಯಾಯ |ಧರ್ಮ

ನಂದಿನಿಗೆ ಅಮುಲ್‌ ಜತೆ ಕೈಜೋಡಿಸುವ ಅವಶ್ಯಕತೆಯಿಲ್ಲ

ಗುಜರಾತಿನ ಅಮುಲ್, ಇಡೀ ರಾಷ್ಟ್ರದಾದ್ಯಂತ ತನ್ನ ಮಾರುಕಟ್ಟೆಯನ್ನು  ವಿಸ್ತರಿಸಿಕೊಂಡಿದೆ. ಇದು ರಾಜ್ಯಗಳ ಹಾಲು ಉತ್ಪಾದಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದು, ರಾಜ್ಯಗಳ ಹಾಲು ಸಂಸ್ಥೆಗಳನ್ನು ಆರ್ಥಿಕ ನಷ್ಟಕ್ಕೆ ತಳ್ಳಿ, ಬಳಿಕ ಮುಚ್ಚಿಸಿ ವಿಲೀನಗೊಳಿಸಿಕೊಳ್ಳುವ ಹುನ್ನಾರ ಮಾಡುತ್ತಿದೆ. ಈ ಅಪಾಯವನ್ನು ಅರಿತು ರಾಜ್ಯದ ರೈತರು, ಸಾರ್ವಜನಿಕರು ಬೃಹತ್‌ ಆಂದೋಲನ ಮಾಡಿ ಅಮುಲ್ ಮಾರಾಟವನ್ನು ನಿಲ್ಲಿಸಬೇಕು – ಸುನಂದಾ ಜಯರಾಂ, ರೈತ ಮುಖಂಡರು.

ಗುಜರಾತಿನ ಅಮುಲ್ ಹಾಲು ಮತ್ತು ಹಾಲು ಉತ್ಪನ್ನಗಳ online ಮಾರುಕಟ್ಟೆಯಿಂದಾಗಿ ಕರ್ನಾಟಕದ ನಂದಿನಿ ಹಾಲು ಮತ್ತು ಅದರ ಹಾಲು ಉತ್ಪಾದನೆಗಳ ಮಾರುಕಟ್ಟೆಯ ಮೇಲೆ ಬಹುದೊಡ್ಡ ಹೊಡೆತವಾಗಿ KMF ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಇದನ್ನು ತಡೆಯಲೇಬೇಕಾಗಿದೆ.

ಗುಜರಾತಿನ ಖೇಡ ಜಿಲ್ಲಾ ಬ್ರಾಂಡ್ ಅಮುಲ್ ಹಾಲು, ಹಾಲು ಉತ್ಪನ್ನಗಳನ್ನು ಕರ್ನಾಟಕದಲ್ಲಿ online ಮಾರುಕಟ್ಟೆ ಮುಖಾಂತರ ಮಾರಾಟ ಮಾಡುವ ನಿರ್ಧಾರವು ಕರ್ನಾಟಕ ರಾಜ್ಯದ KMF ಬ್ರಾಂಡ್ ನಂದಿನಿ ಹಾಲು, ಹಾಲು ಉತ್ಪನ್ನಗಳ ಮಾರುಕಟ್ಟೆಯ ಮೇಲೆ ನೇರವಾಗಿ, ಶೀಘ್ರವಾಗಿ  ಪರಿಣಾಮ ಬೀರಿ KMF ಒಕ್ಕೂಟದ 15 ಜಿಲ್ಲಾ ಒಕ್ಕೂಟಗಳು ಆರ್ಥಿಕ ಸಂಕಷ್ಟಕ್ಕೆ  ತುತ್ತಾಗಲಿವೆ. ಈ ಮುಖಾಂತರ KMF ಬ್ರಾಂಡ್ ನಂದಿನಿಗೆ ಧಕ್ಕೆಯಾಗುತ್ತದೆ.

ಇತ್ತೀಚಿನ ದಶಕಗಳಲ್ಲಿ ರೈತರು ಕೃಷಿ ಕ್ಷೇತ್ರದ ಜೊತೆ ಪ್ರಮುಖವಾಗಿ ಹೈನುಗಾರಿಕೆಯನ್ನು ನಂಬಿ ಬದುಕುತ್ತಿದ್ದಾರೆ. ಬೆಲೆಯಲ್ಲಿ ಸ್ಥಿರತೆ ಇರುತ್ತದೆ. ರೈತರು ಹಾಲು ಉತ್ಪಾದನೆಯಲ್ಲಿ ನಂಬಿಕೆ ಇಟ್ಟಿರುತ್ತಾರೆ. KMF ಹಾಲು ಸರಬರಾಜು, ಸಂಸ್ಕರಣೆ, ಮಾರ್ಗಸೂಚಿಯಂತೆ ಮಾರುಕಟ್ಟೆಯಲ್ಲಿ ನಿರಂತರ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಹಾಲು ಉತ್ಪಾದಕ ರೈತರ ಹಿತವನ್ನು ಕಾಯ್ದುಕೊಂಡಿದೆ.

ಗುಜರಾತಿನ ಅಮುಲ್, ಖೇಡ ಜಿಲ್ಲಾ ಒಕ್ಕೂಟದ ಬ್ರಾಂಡ್ ಆಗಿದ್ದು ಇಡೀ ರಾಷ್ಟ್ರದಾದ್ಯಂತ ತನ್ನ ಮಾರುಕಟ್ಟೆಯನ್ನು  ವಿಸ್ತರಿಸಿಕೊಂಡಿದೆ. ಇದು ರಾಜ್ಯಗಳ ಹಾಲು ಉತ್ಪಾದಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದು, ರಾಜ್ಯಗಳ ಹಾಲು ಸಂಸ್ಥೆಗಳನ್ನು ಆರ್ಥಿಕ ನಷ್ಟಕ್ಕೆ ತಳ್ಳಿ ಬಳಿಕ ಮುಚ್ಚಿಸಿ ವಿಲೀನಗೊಳಿಸಿಕೊಳ್ಳುವ ಹುನ್ನಾರ ಮಾಡುತ್ತಿದೆ. (ಹಿಂದೆ KMF ಉತ್ಪನ್ನಗಳನ್ನು ಅಮುಲ್ ಬ್ರಾಂಡ್ ಮುಖಾಂತರ ಮಾರಾಟ ಮಾಡಿಸಲಾಗುತ್ತಿತ್ತು.) ಈ ಹುನ್ನಾರವನ್ನು ರಾಜ್ಯದ ರೈತರು, ಸಾರ್ವಜನಿಕರು ಅರ್ಥಮಾಡಿಕೊಂಡು ಅಮುಲ್ ಬ್ರಾಂಡಿನ ಹಾಲು, ಹಾಲು ಉತ್ಪನ್ನಗಳ ಮಾರಾಟವನ್ನು ಬೃಹತ್‌ ಆಂದೋಲನ ಮಾಡಿ ನಿಲ್ಲಿಸಬೇಕು. KMF ಕೂಡ ನಂದಿನಿ ಬ್ರಾಂಡ್‍ನ ಹಾಲು, ಹಾಲು ಉತ್ಪನ್ನಗಳನ್ನು online ಮುಖಾಂತರ ಎಲ್ಲಾ ಮಾರಾಟ ಕೇಂದ್ರಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಿ, ಅಮುಲ್ ಸಂಸ್ಥೆಯ ಈ ಹುನ್ನಾರವನ್ನು ತಡೆಯಬೇಕು. ಇಲ್ಲದಿದ್ದರೆ KMF ಮುಳುಗಿಸಲು ನಿರಂತರ ಸಂಚು ನಡೆಯುತ್ತದೆ.  

ಯಾವತ್ತಿಗೂ ನಂದಿನಿ ನಮ್ಮ ಆಯ್ಕೆಯಾಗಿರಲಿ.

ಸುನಂದ ಜಯರಾಂ

ರೈತ ಮುಖಂಡರು

Related Articles

ಇತ್ತೀಚಿನ ಸುದ್ದಿಗಳು