ನಂದಿನಿ ಹಾಲಿನ ದರದಲ್ಲಿ ಲೀಟರಿಗೆ 2.10 ರೂ ಹೆಚ್ಚಳವಾಗಿದ್ದು, ನಾಳೆಯಿಂದಲೇ ಹೊಸ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ತಿಳಿಸಿದ್ದು, ಕೆಎಂಎಫ್ ನಂದಿನಿ ಹಾಲಿ ದರ ಹೆಚ್ಚಳ ಮಾಡಿದ್ದು, ನಂದಿನಿ ಹಾಲಿನ ದರ ಲೀ.ಗೆ 2.10 ರೂ ಹೆಚ್ಚಳ ಮಾಡಿದೆ. ಹಲವು ದಿನಗಳಿಂದ ದರ ಪರಿಷ್ಕರಣೆ ಬಗ್ಗೆ ಪ್ರಸ್ತಾಪವಿತ್ತು. ಇದು ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿ ಲೀಟರ್ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲು ಇನ್ಮುಂದೆ 1,050 ಎಂಎಲ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಹಾಲು 550 ಎಂಎಲ್ ಹೆಚ್ಚುವರಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.