Tuesday, January 28, 2025

ಸತ್ಯ | ನ್ಯಾಯ |ಧರ್ಮ

ದಾವಣಗೆರೆಯಲ್ಲಿ ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ

ದಾವಣಗೆರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಕ್ಷರ ಹಬ್ಬ ಪ್ರಯುಕ್ತ ದಾವಣಗೆರೆ ಲಿಟರರಿ ಫೋರಂ ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಪಲ್ಲವಿ ಯಡೆಯೂರು ಅವರ ʼಕಣಗಿಲೆʼ, ಎಸ್‌ ನಟರಾಜ್‌ ಅವರ ʼಮಗಳುʼ ಹಾಗೂ ತಿರುಪತಿ ಭಂಗಿ ಅವರ ʼನಾಯಿಯ ಹೆಜ್ಜೆʼ ಕಥೆಗಳು ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಪ್ರಶಸ್ತಿ ವಿಜೇತರು ತಲಾ ಐದು ಸಾವಿರ ರೂಪಾಯಿಗಳ ನಗದು ಹಾಗೂ ಸ್ಮರಣ ಫಲಕ ಪಡೆಯಲಿದ್ದಾರೆ.

ಸ್ಮಿತಾ ಅಮೃತರಾಜ ಅವರ ‘ಕಮಲಿ’ ಕತೆಯೂ ಮಹಿಳಾ ಕೇಂದ್ರಿತ’ ವಿಶೇಷ ಕಥಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ಈ ಪ್ರಶಸ್ತಿಯನ್ನು ‘ಅವಳ ಹೆಜ್ಜೆ’ ತಂಡವು ಪ್ರಯೋಜಿಸಿದೆ.

ಕತೆಗಾರ ಹಾಗೂ ವಿಮರ್ಶಕರಾದ ಕಂನಾಡಿಗ ನಾರಾಯಣ ಹಾಗೂ ಕತೆಗಾರ ಹನಮಂತ ಹಾಲಿಗೆರೆ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಸ್ಪರ್ಧೆಗೆ ಹೊರನಾದಿನಿಂದ ಸೇರಿದಂತೆ 120ಕ್ಕೂ ಹೆಚ್ಚು ಕತೆಗಳು ಬಂದಿದ್ದವು.

ಉಳಿದಂತೆ ಅತ್ಯುತ್ತಮ 20 ಕತೆಗಳಿಗೆ ಪ್ರಶಸ್ತಿ ಫಲಕ ಸ್ಮರಣಿಕೆಗಳನ್ನು ನೀಡಲಾಗುವದು. ಈ ಆಯ್ದ ಕತೆಗಳನ್ನು ದಾವಣಗೆರೆ ಲಿಟರರಿ ಪೋರಂ ಪುಸ್ತಕ ರೂಪದಲ್ಲಿ ಪ್ರಕಟಿಸಲಿದ್ದು, ಪುಸ್ತಕ ಬಿಡುಗಡೆಯೂ ಫೆಬ್ರುವರಿ 7, 8 ಹಾಗೂ 9 ರಂದು ಮೂರು ದಿನಗಳ ಕಾಲ ದಾವಣಗೆರೆಯ MBA ಕಾಲೇಜಿನಲ್ಲಿ ನಡೆಯಲಿರುವ ರಾಷ್ಟ್ರೀಯ ಅಕ್ಷರ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಲಿಟರರಿ ಪೋರಂ ಸಂಚಾಲಕ ಶ್ರೀ ಹರ್‌ ಸಾಲಿಮಠ ತಿಳಿಸಿದ್ದಾರೆ.

ಮೆಚ್ಚುಗೆಯ ಬಹುಮಾನ ಪಡೆದ 20 ಕತೆಗಳು ಹಾಗೂ ಕತೆಗಾರರು

ಹರಿಯಲಾರದವಳು – ಉಷಾ ನರಸಿಂಹನ್
ಎರಡು ಮೋತಿಯ ಪೆನ್ನು – ಕಲಕೇಶ ಗೊರವರ
ನೀವು ಕಾಣಿರೆ – ನಂದಿನಿ ಹೆದ್ದುರ್ಗ
ಸಂಗ್ರಾಮ – ಪ್ರೇಮಲತಾ ಬಿ
ನಿಯೋಗ – ರವಿಕುಮಾರ್ ಕುಮಾರಪುರ
ದಡವನರಸಿದ ನದಿ – ಪಾಪು ಗುರು
ಬೆಳಕು ಕುಡಿದ ಸಂಜೆ – ಸದಾಶಿವ ಸೊರಟೂರು
ಬಳಪದ ಕಲ್ಲು
ಶ್ರೀರಮಣ ನಿರ್ಯಾಣ – ಅಜಿತ ಹರೀಶಿ
ಸ್ವಾಭಿಮಾನ ಸಮುದ್ರ
ಗೋಧೂಳಿ
ಅಲೈ ಹಬ್ಬ – ಶಿವಪ್ಪ ಬಡಿಗೇರ
ತುಪ್ಪದ ಗಿಂಡಿ – ಸನಾವುಲ್ಲಾ ನವಿಲೆಹಾಳ
ಇಣುಕು – ಪೂರ್ಣಿಮಾ ಮಾಳಗಿಮನಿ
ಶಕುನದ ಚುಕ್ಕಿ – ನಾಗರಾಜ ಕೋರಿ
ಹಂಗು – ಭದ್ರಪ್ಪ ಹೆನ್ಲಿ
ಅಕ್ಕನ ಗಂಟು – ಪ್ರಕಾಶ ಖಾಡೆ
ಗಾಳಕ್ಕೆ ಸಿಕ್ಕ ಮೀನು – ಇಸ್ಮಾಯಿಲ್ ತಳಕಲ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page