Wednesday, September 17, 2025

ಸತ್ಯ | ನ್ಯಾಯ |ಧರ್ಮ

ನರೇಂದ್ರ ಮೋದಿ ಹುಟ್ಟುಹಬ್ಬ; ಮತ್ತೆ ಟ್ರೆಂಡಿಂಗ್ ಗೆ ಬರ್ತಿದೆ “ರಾಷ್ಟ್ರೀಯ ನಿರುದ್ಯೋಗ ದಿನ”

ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನವನ್ನು “ರಾಷ್ಟ್ರೀಯ ನಿರುದ್ಯೋಗ ದಿನ”ವನ್ನಾಗಿ ಆಚರಿಸುತ್ತಿರುವ ದೇಶದ ಜನತೆ ಇದೀಗ ಈ ವರ್ಷಕ್ಕೂ ಈ ದಿನವನ್ನು ಟ್ರೆಂಡಿಂಗ್‌ಗೆ ತರುವ ಪ್ರಯತ್ನ ಕಂಡುಬಂದಿದೆ. ಬೆಳಿಗ್ಗೆ 7 ಗಂಟೆಯ ಒಳಗೇ ಸಾಮಾಜಿಕ ಜಾಲತಾಣದಲ್ಲಿ 10 ಸಾವಿರಕ್ಕೂ ಹೆಚ್ಚು ಟ್ವಿಟ್ ಗಳು “ರಾಷ್ಟ್ರೀಯ ಬೇರೋಜಗಾರ್ ದಿವಸ್” (ರಾಷ್ಟ್ರೀಯ ನಿರುದ್ಯೋಗ ದಿನ) ಟ್ರೆಂಡಿಂಗ್ ನಲ್ಲಿ ಬಂದಿವೆ.

ದೇಶದಲ್ಲಿ ಮಕ್ಕಳ ಮೇಲಿನ ನೆಹರೂ ಅವರ ಪ್ರೀತಿಯನ್ನು ಪರಿಗಣಿಸಿ, ಅವರ ಜನ್ಮದಿನವನ್ನು ಮಕ್ಕಳ ದಿನವೆಂದು, ಇಂದಿರಾ ಅವರ ಜನ್ಮದಿನವನ್ನು ಕೋಮು ಸೌಹಾರ್ದ ದಿನವೆಂದು ಮತ್ತು ರಾಜೀವ್ ಗಾಂಧಿ ಅವರ ಜನ್ಮದಿನವನ್ನು ‘ಸದ್ಭಾವನಾ ದಿವಸ್’ ಎಂದು ಆಚರಿಸಲಾಗುತ್ತದೆ. ಆದರೆ ನರೇಂದ್ರ ಮೋದಿ ಅಧಿಕಾರದಲ್ಲಿ ಇರುವಾಗಲೇ ಇಂತಹದ್ದೊಂದು ದಿನವನ್ನು ರಾಷ್ಟ್ರವ್ಯಾಪಿ ಟ್ರೆಂಡಿಂಗ್ ಗೆ ತರುತ್ತಿರುವುದು ಆಡಳಿತದಲ್ಲಿರುವ ಬಿಜೆಪಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ.

ಭಾರತವು ವಿಶ್ವದ ಅತ್ಯಂತ ಕಿರಿಯ ದೇಶವಾಗಿದ್ದರೂ, ದೇಶದ ದುಡಿಯುವ ವಯಸ್ಸಿನ ಜನಸಂಖ್ಯೆಯ ಶೇಕಡಾ 60 ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ ಅಥವಾ ಕೆಲಸ ಹುಡುಕುತ್ತಿಲ್ಲ ಎಂಬುದು ಕಳವಳಕ್ಕೆ ಕಾರಣವಾಗಿದೆ.

ವಿಶೇಷವಾಗಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಒಂದು ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂಬಂತೆ ಆಚರಿಸಲಾಗುತ್ತದೆ. ಆಚರಿಸುವವರ ಪ್ರಕಾರ ಇದೊಂದು ಸಾತ್ವಿಕ ಪ್ರತಿಭಟನೆ ಎಂಬುದು ಅವರ ಅಭಿಪ್ರಾಯವಾಗಿದೆ. ಈ ಮೂಲಕವಾದರೂ ದೇಶದಲ್ಲಿ ಉದ್ಯೋಗ ಸೃಷ್ಟಿ ಆಗಲಿ ಎಂಬ ಬಗ್ಗೆಯೂ ಹಲವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮೋದಿ ವಾರ್ಷಿಕ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು, ಆದರೆ ಕಳೆದ ಎಂಟು ವರ್ಷಗಳಲ್ಲಿ ಕೇವಲ ಏಳು ಲಕ್ಷ ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಈಗಾಗಲೇ 22 ಕೋಟಿ ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ದೇಶದ ತೀವ್ರ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ಹಿಡಿದಿದೆ.

ನಿರುದ್ಯೋಗ ಅಥವಾ ಉದ್ಯೋಗ ಸೃಷ್ಟಿಯ ಬಗ್ಗೆ ರಾಷ್ಟ್ರೀಯ ಚರ್ಚೆಗಳು ನಡೆಯುತ್ತಿಲ್ಲ ಮತ್ತು ಸರ್ಕಾರವು ನಿರುದ್ಯೋಗದ ಪ್ರಮುಖ ವಿಷಯದ ಬಗ್ಗೆ ಚರ್ಚಿಸಲು ಏಕೆ ಬಯಸುವುದಿಲ್ಲ ಎಂದು ದೇಶದ ಅನೇಕ ಯುವಕರು ತಮ್ಮ ಆತಂಕ ಹೊರಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page