Home ದೇಶ ಮೋದಿ ಬರ್ತ್‌ಡೇ | ಮತ್ತೆ ಟ್ರೆಂಡ್‌ ಆದ ರಾಷ್ಟ್ರೀಯ ನಿರುದ್ಯೋಗ ದಿನ!

ಮೋದಿ ಬರ್ತ್‌ಡೇ | ಮತ್ತೆ ಟ್ರೆಂಡ್‌ ಆದ ರಾಷ್ಟ್ರೀಯ ನಿರುದ್ಯೋಗ ದಿನ!

0

ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ. ಮೋದಿ ಬೆಂಬಲಿಗರು ಮತ್ತು ಬಿಜೆಪಿಗರು ಜನ್ಮದಿನದ ಸಂಭ್ರಮದಲ್ಲಿದ್ದರೆ, ಟ್ವಿಟರ್‌ (X) ನಲ್ಲಿ #राष्ट्रीय_बेरोजगार_दिवस #NationalUnemploymentDay ಟ್ರೆಂಡ್‌ ಆಗುತ್ತಿದೆ.

ಹೌದು ಕಳೆದ ವರ್ಷದಂತೆ ಈ ಬಾರಿಯೂ ಟ್ವಟರ್‌ ವೇದಿಕೆಯಲ್ಲಿ ಮೋದಿಯವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಮತ್ತು ಈ ಕುರಿತು ಟ್ವೀಟುಗಳ ಸುರಿಮಳೆಯೇ ಆಗುತ್ತಿದೆ.

ಮೋದಿ ಅಧಿಕಾರಕ್ಕೆ ಬರುವಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗಳನ್ನು ಸೃಷ್ಟಿಸುವುದಾಗಿ ತಮ್ಮ ಚುನಾವಣಾ ಭಾಷಣಗಳಲ್ಲಿ ಭರವಸೆ ನೀಡಿದ್ದರು. ಆದರೆ ನೋಟ್‌ ಬ್ಯಾನ್‌ ರೀತಿಯ ಅವೈಜ್ಞಾನಿಕ ನಿರ್ಧಾರಗಳು ಹಾಗೂ ಕೊರೋನಾ ಪಿಡುಗಿನ ಕೆಟ್ಟ ನಿರ್ವಹಣೆ ಉದ್ಯೋಗ ಮಾರುಕಟ್ಟೆಯನ್ನು ಮಕಾಡೆ ಮಲಗಿಸಿರುವುದು ಕಣ್ಣ ಮುಂದಿರುವ ಸತ್ಯ.

ಇದಕ್ಕಾಗಿಯೇ ಕಳೆದ ಬಾರಿ ನಿರುದ್ಯೋಗಿಗಳು ಸೇರಿಕೊಂಡು ರಾಷ್ಟ್ರೀಯ ನಿರುದ್ಯೋಗಿಗಳ ದಿನವನ್ನು ಟ್ವಿಟರಿನಲ್ಲಿ ಆಚರಿಸಿದ್ದರು, ಹಾಗೂ ಬಹಳ ದೊಡ್ಡ ಮಟ್ಟದಲ್ಲಿ ದಿನವಿಡೀ ಟ್ರೆಂಡ್‌ ಆಗಿತ್ತು. ಅದೇ ಟ್ರೆಂಡ್‌ ಇಂದೂ ಮುಂದುವರೆದಿದ್ದು ಬೆಳಗ್ಗೆಯಿಂದ ರಾಷ್ಟ್ರೀಯ ನಿರುದ್ಯೋಗಿಗಳ ದಿನಾಚರಣೆ ಈಗ ಮತ್ತೆ ಟ್ರೆಂಡ್‌ ಆಗುತ್ತಿದೆ.

ಈ ದಿನ ಹಲವರು ಹಲವು ಬಗೆಯಲ್ಲಿ ಮೋದಿ ಮತ್ತು ಬಿಜೆಪಿಯ ಕಾಲೆಳೆದು ಟ್ವೀಟ್‌ ಮಾಡುತ್ತಿದ್ದು, ಬಗೆಬಗೆಯ ವಿಡೀಯೋ ಮತ್ತು ಪೋಸ್ಟರುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅವುಗಳಲ್ಲಿ ಕೆಲವು ಹೀಗಿವೆ

https://x.com/2024_For_INDIA/status/1703274752419545349?s=20

https://x.com/kumarhemant91/status/1703256450829791365?s=20

https://x.com/SilentEyes0106/status/1703298761475203379?s=20

You cannot copy content of this page

Exit mobile version