Home ಆರೋಗ್ಯ Scrub Typhus: ಒಡಿಶಾದಲ್ಲಿ ಮಾರಣಾಂತಿಕ ರೋಗ – 11 ಹೊಸ ಪ್ರಕರಣಗಳು

Scrub Typhus: ಒಡಿಶಾದಲ್ಲಿ ಮಾರಣಾಂತಿಕ ರೋಗ – 11 ಹೊಸ ಪ್ರಕರಣಗಳು

0

ಮಾರಣಾಂತಿಕ ಸ್ಕ್ರಬ್ ಟೈಫಸ್ ಕಾಯಿಲೆ ಒಡಿಶಾ ರಾಜ್ಯವನ್ನು ತಲ್ಲಣಗೊಳಿಸುತ್ತಿದೆ. ಇತ್ತೀಚೆಗೆ ರಾಜ್ಯದ ಸುಂದರ್‌ಗಢ ಜಿಲ್ಲೆಯಲ್ಲಿ 11 ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ಕಳುಹಿಸಲಾದ 59 ಮಾದರಿಗಳಲ್ಲಿ 11 ಜನರರಲ್ಲಿ ಸ್ಕ್ರಬ್ ಟೈಫಸ್‌ ಸೋಂಕು ಪತ್ತೆಯಾಗಿದೆ. ಸುಂದರ್‌ಗಢ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ಕನ್ಹುಚರಣ್ ನಾಯಕ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ ಏಳು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿತ ಕೀಟಗಳ ಕಡಿತದಿಂದ ಸ್ಕ್ರಬ್ ಟೈಫಸ್ ಸೋಂಕು ಹರಡುತ್ತದೆ.
ಈ ಕೀಟಗಳ ಕಡಿತವು ಬ್ಯಾಕ್ಟೀರಿಯಾ ದೇಹ ಪ್ರವೇಶಿಸಲು ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು. ಈ ಕಾಯಿಲೆಯಿಂದ ಇದುವರೆಗೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಬರ್ಗಡ್ ಜಿಲ್ಲೆಯಲ್ಲಿ 6 ಜನರು ಮತ್ತು ಸುಂದರ್‌ಗಢ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಆರೋಗ್ಯ ಇಲಾಖೆ ಶನಿವಾರ ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ಮೂರು ಸದಸ್ಯರ ತಂಡವನ್ನು ಬರ್ಗಢ್ ಜಿಲ್ಲೆಗೆ ಪರಿಸ್ಥಿತಿಯನ್ನು ಪರಿಶೀಲಿಸಲು ಕಳುಹಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ 11 ಸಕ್ರಿಯ ಪ್ರಕರಣಗಳಿವೆ.

ಕೃಷಿ ಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಆಗಾಗ್ಗೆ ಬರುವ ಜನರು ಈ ರೋಗಕ್ಕೆ ತುತ್ತಾಗುತ್ತಾರೆ. ಸ್ಕ್ರಬ್ ಟೈಫಸ್ ಎಂಬ ಜ್ವರವು ಚಿಕಿತ್ಸೆ ನೀಡದೆ ಬಿಟ್ಟರೆ ಮಾರಣಾಂತಿಕವಾಗಿ ಪರಿಣಮಿಸಬಹುದು. ರೋಗವು ಮುಂದುವರಿದರೆ ಬಹು ಅಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು. ಪರಿಣಾಮವಾಗಿ, ರೋಗಿಯು ಸಾಯುತ್ತಾನೆ.

ಪೊದೆಗಳು, ಕಾಡುಗಳು ಮತ್ತು ಪ್ರಾಣಿಗಳ ಹತ್ತಿರ ವಾಸಿಸುವ ಜನರು ಸಾಮಾನ್ಯವಾಗಿ ಇದರ ಕಡಿತದಿಂದ ಪ್ರಭಾವಿತರಾಗುತ್ತಾರೆ. ಮಕ್ಕಳು ಮತ್ತು ವೃದ್ಧರು ಹೆಚ್ಚಾಗಿ ಇದರಿಂದ ಬಳಲುತ್ತಿದ್ದಾರೆ. ಕೀಟಗಳ ಕಡಿತದಿಂದ ಉಂಟಾದ ಗಾಯವು ಈ ರೋಗದ ಲಕ್ಷಣವಾಗಿದೆ ಎಂದು ತಜ್ಞರು ಹೇಳುತ್ತಾರೆ.

ನಿಮಗೆ ಈ ಕಾಯಿಲೆ ಬಂದರೆ ಡೆಂಗ್ಯೂನಂತಹ ದದ್ದುಗಳು ನಿಮ್ಮ ದೇಹದ ಮೇಲೆ ಬರುತ್ತವೆ. ಕೆಲವರಲ್ಲಿ ಅಜೀರ್ಣ, ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವೆಂಟಿಲೇಟರ್ ಮತ್ತು ಐಸಿಯು ಸೌಲಭ್ಯಗಳು ರೋಗಿಗೆ ಅತ್ಯಗತ್ಯ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ರೋಗಿಯು ಸಾಯಬಹುದು.

You cannot copy content of this page

Exit mobile version