Tuesday, October 1, 2024

ಸತ್ಯ | ನ್ಯಾಯ |ಧರ್ಮ

ಕೇಂದ್ರ ಸರ್ಕಾರದಿಂದ ನವರಾತ್ರಿ ಗಿಫ್ಟ್; LPG ಸಿಲಿಂಡರ್ ದರ ಏರಿಕೆ

ಅಕ್ಟೋಬರ್ ತಿಂಗಳ ಮೊದಲ ದಿನದಂದೇ ದೇಶದ ಜನರಿಗೆ ಸಿಲಿಂಡರ್ ಬೆಲೆ ಏರಿಸಿ ಕೇಂದ್ರ ಸರ್ಕಾರ ದುಬಾರಿ ಗಿಫ್ಟ್ ನೀಡಿದೆ. ನವರಾತ್ರಿ ಹಬ್ಬ ಪ್ರಾರಂಭದ ಹಂತದಲ್ಲೇ ಈ ಬೆಲೆಯೇರಿಕೆ ಹೊರೆ ಹಾಕಿದ್ದು ಜನ ಮತ್ತೆ ಮತ್ತೆ ಏರುತ್ತಿರುವ LPG ದರ ಏರಿಕೆ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ ಬೆಲೆ ಮತ್ತೊಮ್ಮೆ ಏರಿಕೆ ಮಾಡಿವೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂಪಾಯಿ ಹೆಚ್ಚಾಗಿದ್ದು, ದೆಹಲಿಯಲ್ಲಿ 1740 ರೂಪಾಯಿಗೆ ಏರಿಕೆಗೊಂಡಿದೆ. ಆದರೆ ಗೃಹಬಳಕೆ ಸಿಲಿಂಡರ್ ಬೆಲೆ 14.2ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನ ದರವನ್ನೇ ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಮುಂದುವರೆಸಲಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು 48.50 ರೂಪಾಯಿ ಬೆಲೆ ಏರಿಕೆ ಕಂಡುಬಂದಿದ್ದು 1,818 ರೂಪಾಯಿಗೆ ತಲುಪಿದೆ. ಬೆಲೆ ಪರಿಷ್ಕರಣೆಗೂ ಮುನ್ನ ಬೆಲೆಯು 19 KG ಪ್ರತಿ ಸಿಲಿಂಡರ್‌ಗೆ 1,769.50 ರೂಪಾಯಿಗಳಷ್ಟಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page