Home ದೇಶ ಛತ್ತೀಸ್‌ಗಢ: ಬಿಜೆಪಿ ಕಾರ್ಯಕರ್ತನನ್ನು ಕೊಂದ ನಕ್ಸಲರು; ವಾರದಲ್ಲಿ ಐವರು ನಾಗರಿಕರು ಬಲಿ

ಛತ್ತೀಸ್‌ಗಢ: ಬಿಜೆಪಿ ಕಾರ್ಯಕರ್ತನನ್ನು ಕೊಂದ ನಕ್ಸಲರು; ವಾರದಲ್ಲಿ ಐವರು ನಾಗರಿಕರು ಬಲಿ

0

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 35 ವರ್ಷದ ಬಿಜೆಪಿ ಕಾರ್ಯಕರ್ತನನ್ನು ಪೊಲೀಸ್ ಮಾಹಿತಿದಾರನೆಂಬ ಕಾರಣಕ್ಕೆ ನಕ್ಸಲೀಯರು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಕಳೆದ ವಾರ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರು ಐವರು ನಾಗರಿಕರನ್ನು ಕೊಂದಿದ್ದಾರೆ. ಫರ್ಸೆಗಢ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮನಪಲ್ಲಿ ಗ್ರಾಮದ ಕುಡಿಯಮಾಡೋ ಎಂಬ ಬಿಜೆಪಿ ಕಾರ್ಯಕರ್ತನನ್ನು ನಕ್ಸಲೀಯರು ಆತನ ಮನೆಯಲ್ಲಿ ಹತ್ಯೆ ಮಾಡಿದ್ದಾರೆ. ನಕ್ಸಲೀಯರು ಮನೆಯಿಂದ ಹೊರಗೆ ಎಳೆದೊಯ್ದು ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾವೋವಾದಿ ರಾಷ್ಟ್ರೀಯ ಉದ್ಯಾನ ಸಮಿತಿಯು ಅಲ್ಲಿಯೇ ಬಿಟ್ಟು ಹೋಗಿರುವ ಕರಪತ್ರದಲ್ಲಿ ತಾನೇ ಕೊಲೆ ಮಾಡಿರುವುದಾಗಿ ಹೇಳಿದೆ. ಪೊಲೀಸ್ ಇನ್‌ಫಾರ್ಮರ್ ಆಗಿ ಕೆಲಸ ಮಾಡೋ ಕಾರಣಕ್ಕೆ ಕೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಮಂಗಳವಾರದ ಘಟನೆ ಸೇರಿದಂತೆ, ಈ ವರ್ಷ ಬಸ್ತಾರ್ ವಿಭಾಗದಲ್ಲಿ 60 ನಾಗರಿಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ.

You cannot copy content of this page

Exit mobile version