Monday, October 6, 2025

ಸತ್ಯ | ನ್ಯಾಯ |ಧರ್ಮ

ಧಾರ್ಮಿಕ ದ್ವೇಷ ಪ್ರಚೋದಿಸಿದ ಮಾಧ್ಯಮಗಳು: ಜೀ ನ್ಯೂಸ್, ಟೈಮ್ಸ್ ನೌ ನವಭಾರತ್ ವಿರುದ್ಧ ಎನ್‌ಬಿಡಿಎಸ್‌ಎ ಕ್ರಮ

ದೆಹಲಿ: ಧಾರ್ಮಿಕ ದ್ವೇಷವನ್ನು ಹರಡುತ್ತಿದ್ದ ಮಾಧ್ಯಮ ಸಂಸ್ಥೆಗಳಾದ ಜೀ ನ್ಯೂಸ್ ಮತ್ತು ಟೈಮ್ಸ್ ನೌ ನವಭಾರತ್ ವಿರುದ್ಧ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎನ್‌ಬಿಡಿಎಸ್‌ಎ) ಕ್ರಮ ಕೈಗೊಂಡಿದೆ.

ಈ ಕುರಿತು ಎನ್‌ಬಿಡಿಎಸ್‌ಎ ಆದೇಶಗಳನ್ನು ಹೊರಡಿಸಿದೆ. ಈ ಸಂಸ್ಥೆಗಳು ಪ್ರಸಾರ ಮಾಡಿದ ವರದಿಗಳನ್ನು ಸ್ಪಷ್ಟವಾದ ಇಸ್ಲಾಮೋಫೋಬಿಕ್ (ಇಸ್ಲಾಂ ಭಯವನ್ನು ಹುಟ್ಟಿಸುವ) ಎಂದು ಟೀಕಿಸಲಾಗಿದೆ. ಈ ಸಂಸ್ಥೆಗಳು ಪ್ರಸಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ. ದ್ವೇಷ ಭಾಷಣದ ವರದಿಗಳನ್ನು ಕೂಡಲೇ ತೆಗೆದುಹಾಕುವಂತೆ (Delete) ಆದೇಶಿಸಿದೆ.

ದೇಶದ ಮುಸ್ಲಿಂ ಸಮುದಾಯದ ವಿರುದ್ಧ ಈ ಸಂಸ್ಥೆಗಳು ಧಾರ್ಮಿಕ ದ್ವೇಷವನ್ನು ಹರಡುತ್ತಿವೆ ಎಂದು ಸಂಶೋಧಕರು ಮತ್ತು ಪತ್ರಕರ್ತರಾದ ಇಂದ್ರಜಿತ್ ಘೋರ್ಪಡೆ ಅವರು ಕಳೆದ ವರ್ಷ ನೀಡಿದ ದೂರಿನ ಆಧಾರದ ಮೇಲೆ ಈ ಆದೇಶವನ್ನು ನೀಡಲಾಗಿದೆ.

ಜೀ ನ್ಯೂಸ್ ಸರಣಿಯಾಗಿ ಪ್ರಸಾರ ಮಾಡಿದ ‘ಮೆಹಂದೀ ಜಿಹಾದ್ ಪರ್ ದೇ ದಾನಾ-ದಾನ್’, ‘ಲಾಠಿ ಸೆ ಲೈಸ್ ರಹೆಂಗೆ, ಜಿಹಾದಿಯೋಂ ಕೋ ರೊಕೆಂಗೆ’, ಮತ್ತು ಟೈಮ್ಸ್ ನೌ ನವಭಾರತ್ ಪ್ರಸಾರ ಮಾಡಿದ ‘ಲವ್ ಜಿಹಾದ್’ ನಂತಹ ವರದಿಗಳ ವಿರುದ್ಧ ಅವರು ದೂರು ನೀಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page