Wednesday, June 26, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೀಯಾಳಿಕೆ: ವಿಶ್ವವಾಣಿಯ ವಿಶ್ವೇಶ್ವರ ಭಟ್‌ಗೆ ಎನ್‌ಸಿಡಬ್ಲು ಸಮನ್ಸ್

ಹೊಸದಿಲ್ಲಿ: ದೇಶದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೈಬಣ್ಣವನ್ನು ಹೀಯಾಳಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ಗೆ ನೊಟೀಸ್‌ ಜಾರಿ ಮಾಡಿದೆ. ಈ ಕುರಿತು ಟ್ವೀಟ್‌ ಮಾಡಿರುವ ರಾಷ್ಟ್ರೀಯ ಮಹಿಳಾ ಆಯೋಗವು, “ರಾಷ್ಟ್ರೀಯ ಮಹಿಳಾ ಆಯೋಗವು ಗೌರವಾನ್ವಿತ ರಾಷ್ಟ್ರಪತಿಗಳನ್ನು ಹೀಯಾಳಿಸಿರುವ ಪೋಸ್ಟನ್ನು ಗಣನೆಗೆ ತೆಗೆದುಕೊಂಡಿದ್ದು ಸದರಿ ಪತ್ರಕರ್ತರಿಗೆ ನೋಟೀಸು ಜಾರಿ ಮಾಡಿದೆ. ದಿನಾಂಕ 26.10.2022ರ ಮದ್ಯಾಹ್ನ 12.30ಕ್ಕೆ ಸರಿಯಾಗಿ ಅವರು ವಿಚಾರಣೆಗೆ ಹಾಜರಿರತಕ್ಕದ್ದು” ಎಂದು ತಿಳಿಸಿದೆ. ವಿಶ್ವವಾಣಿ ದಿನಪತ್ರಿಕೆಯ ಅಂಕಣವೊಂದರಲ್ಲಿ ಅದರ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಬರೆದಿದ್ದ ಸಾಲುಗಳೇ ಈ ಸಮನ್ಸ್‌ ಜಾರಿಗೆ ಕಾರಣವಾಗಿವೆ.

ವಿಶ್ವೇಶ್ವರ ಭಟ್‌ ಅವರು ಬರೆದಿದ್ದೇನು?

ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ತಮ್ಮ ಸಂಪಾದಕತ್ವದ ವಿಶ್ವವಾಣಿ ಪತ್ರಿಕೆಯ ಅಂಕಣದಲ್ಲಿ ಪ್ರವಾಸ ಕಥನ ಬರೆಯುವ ಸಂದರ್ಭದಲ್ಲಿ ಜೋರ್ಡಾನ್‌ ದೇಶದ ಬಿಸಿಲಿನ ತೀವ್ರತೆಯನ್ನು ಬಣ್ಣಿಸುವ ಸಂದರ್ಣದಲ್ಲಿ, ಆ ಬಿಸಿಲಿನಲ್ಲಿ ಮೈಯೆಲ್ಲಾ ಕಾಗೆಯಂತೆ ಕಪ್ಪಾಗುತ್ತದೆ, ಥೇಟ್‌ ಮುರ್ಮು ಅವತಾರ, ಎಂದು ಬರೆದಿದ್ದರು. ವರ್ಣಭೇದವನ್ನು ಸೂಚಿಸುವ ಹಾಗೂ ಜಾತಿಭೇದವನ್ನೂ ಪ್ರದರ್ಶಿಸುವ ಅವರ ಈ ಸಾಲುಗಳ ಕುರಿತು ಪೀಪಲ್‌ ಮೀಡಿಯಾ ಸಾಕ್ಷಿ ಸಮೇತ ವರದಿ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ದೇಶದ ಗೌರವಾನ್ವಿತ ರಾಷ್ಟ್ರಪತಿಗಳನ್ನೂ ಹೀಯಾಳಿಸುವ ಮನಸ್ಥಿತಿಯ ಕುರಿತು ಹಲವರು ಟ್ವೀಟ್‌ ಸಹ ಮಾಡಿದ್ದರು. ಇದನ್ನು ರಾಷ್ಟ್ರೀಯ ಮಹಿಳಾ ಆಯೋಗವು ಪರಿಗಣನೆಗೆ ತೆಗೆದುಕೊಂಡು ಇದೀಗ ವಿಶ್ವೇಶ್ವರ ಭಟ್‌ ಅವರಿಗೆ ಸಮನ್ಸ್‌ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು