ಬೆಂಗಳೂರು: ಸರ್ಕಾರ ಕೂಡಲೇ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆ ಅಭ್ಯರ್ಥಿಗಳು ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದಿನಿಂದ (ಶುಕ್ರವಾರ) ಅನಿರ್ದಿಷ್ಟಾವಧಿಯ ಸತ್ಯಾಗ್ರಹ ನಡೆಸುತ್ತಿದ್ದಾರೆ.
2021ರಲ್ಲಿಯೇ ಸರ್ಕಾರಿ ಪ್ರಥಮ 26 ವಿಷಯಗಳ 1208 ಸಹಾಯಕ ಪ್ರಾಧ್ಯಾಪಕ ಹುದ್ದೆಯ ಅಭ್ಯರ್ಥಿಗಳ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಅಂತಿಮ ಆಯ್ಕೆ ಪಟ್ಟಿಯನ್ನು 2023ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಉನ್ನತ ಶಿಕ್ಷಣ ಇಲಾಖೆಯು ಸಹ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸಬೇಕೆಂದು 26-02-2024ರಂದು ಆದೇಶ ಹೊರಡಿಸಿ ಮತ್ತೆ ಒಂದೇ ದಿನದಲ್ಲಿ ವಾಪಸ್ ಪಡೆದಿದೆ. ಇಲಾಖೆಯ ಅಧಿಕೃತ ಜ್ಞಾಪನ ಪತ್ರವನ್ನು ಹಿಂಪಡೆಯಲು ಕಾರಣವನ್ನು ಸಹ ತಿಳಿಸಿಲ್ಲ. ಹೀಗಾಗಿ ಒಂದು ವರ್ಷದಿಂದ ನಮ್ಮ ಸ್ಥಿತಿ ತ್ರಿಶಂಖು ಸ್ಥಿತಿಯಾಗಿದೆ ಎಂದು ಪ್ರತಿಭಟನಾ ನಿರತ ಸಹಾಯಕ ಪ್ರಾಧ್ಯಾಕರು ದೂರಿದರು.
ಲೋಕಸಭೆ ಚುನವಾಣೆ ಮುಕ್ತಾಯವಾಗಿ ಒಂದೂವರೆ ತಿಂಗಳೂ ಕಳೆದರೂ ಸ್ಥಳನಿಯುಕ್ತಿ ಸಂಬಂಧಪಟ್ಟಂತೆ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಇಲಾಖೆ ಇನ್ನು ಪ್ರಕಟಿಸಿರುವುದಿಲ್ಲ. ಹೀಗೆ 03 ವರ್ಷಗಳು ಮುಗಿದರೂ ನಮಗೆ ನೇಮಕಾತಿ ಆದೇಶ ದೊರೆಯುತ್ತಿಲ್ಲ ಇದರಿಂದಾಗಿ ನಮ್ಮ ಭವಿಷ್ಯವು ಡೋಲಾಯಮಾನವಾಗಿದೆ ಎಂದು ಆರೋಪಿಸಿದರು.
ಉನ್ನತ ಶಿಕ್ಷಣ ಸಚಿವರು ಕಲ್ಯಾಣ ಕರ್ನಾಟಕ ಮೀಸಲಾತಿ ವಿಚಾರವಾಗಿ ಉಚ್ಚನ್ಯಾಯಲಯದಲ್ಲಿ ಕೇಸ್ ಇದ್ದು, ಕೋರ್ಟ್ ಕೇಸ್ ಮುಕ್ತಾಯವಾದ ನಂತರ ನೇಮಕಾತಿ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಆದರೆ ವಾಸ್ತವಾಗಿ ಘನ ಉಚ್ಚನ್ಯಾಯಲಯದ ಮಧ್ಯಂತರ ಆದೇಶದಲ್ಲಿ ಕೌನ್ಸಿಲಿಂಗ್ ನಡೆಸಲು ಸರ್ಕಾರಕ್ಕೆ ಅವಕಾಶ ನೀಡಲಾಗಿದೆ. ಆದರೂ ಸಹ ಸರ್ಕಾರ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಆದೇಶ ನೀಡದಿರುವುದು ಆಯ್ಕೆಯಾದ ಅಭ್ಯರ್ಥಿಗಳು ಅಂತಂತ್ರರಾಗಿದ್ದಾರೆ. ಕಲ್ಯಾಣ ಕರ್ನಾಟಕ ಮೀಸಲಾತಿ ವಿಚಾರವಾಗಿ ಉಚ್ಚನ್ಯಾಯಲಯದಲ್ಲಿ ಕೋರ್ಟ್ ಕೇಸ್ ಇದ್ದರೂ ಇತರೆ ಇಲಾಖೆಗಳಲ್ಲಿ ನ್ಯಾಯಲಯದ ಷರತ್ತಿಗೆ ಒಳಪಟ್ಟು ನೇಮಕಾತಿ ಆದೇಶ ನೀಡಿವೆ. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಪಧವೀಧರ ಶಿಕ್ಷಕರ ನೇಮಕಾತಿಯಲ್ಲಿ ನೇಮಕಾತಿ ಆದೇಶ ನೀಡಿದೆ ಎಂಬುದನ್ನು ಪ್ರತಿಭಟನಕಾರರು ಈ ಸಂದರ್ಭಧಲ್ಲಿ ನೆನಪಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಅಭ್ಯರ್ಥಿಗಳು ಧರಣಿಯಲ್ಲಿ ಭಾಗವಹಿಸಿದ್ದಾರೆ.