Home ದೆಹಲಿ ನೀಟ್ ಪೇಪರ್‌ ಲೀಕ್, ದೆಹಲಿ ಹೈಕೋರ್ಟಿನ – 137 ನ್ಯಾಯಾಧೀಶರ ಏಕಾಏಕಿ ವರ್ಗಾವಣೆ

ನೀಟ್ ಪೇಪರ್‌ ಲೀಕ್, ದೆಹಲಿ ಹೈಕೋರ್ಟಿನ – 137 ನ್ಯಾಯಾಧೀಶರ ಏಕಾಏಕಿ ವರ್ಗಾವಣೆ

ನವದೆಹಲಿ : ದೆಹಲಿ ಹೈಕೋರ್ಟ್ ( delhi high court) ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು,  ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನ ವಿಶೇಷ ನ್ಯಾಯಾಧೀಶೆ (judge) ಅನು ಪ್ರೋವರ್ ಬಾಲಿಗಾ ಸೇರಿದಂತೆ ಒಟ್ಟು 137 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದೆ.

ನ್ಯಾಯಾಧೀಶೆ ಅನು ಪ್ರೋವರ್ ಬಾಲಿಗಾ ಅವರು ಕಳೆದ ಜುಲೈ 25ರಂದಷ್ಟೇ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ಕೇವಲ ಒಂದೇ ವಾರದಲ್ಲಿ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ನ್ಯಾಯಾಧೀಶ ಅಜಯ್ ಗುಪ್ತಾ ಅವರನ್ನು ನಿಯೋಜಿಸಲಾಗಿದೆ.

ಶನಿವಾರ ಹೈಕೋರ್ಟ್ ಹೊರಡಿಸಿರುವ ಆದೇಶದ ಪ್ರಕಾರ, ನ್ಯಾಯಾಧೀಶೆ ಬಾಲಿಗಾ ಅವರನ್ನು ಭಯೋತ್ಪಾದನಾ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮೊದಲ ವಿಚಾರಣೆ ಜುಲೈ 27ರಂದು ನಡೆದಿತ್ತು. ಪ್ರತಿವಾದಿ ಪರ ವಕೀಲರ ಮನವಿ ಮೇರೆಗೆ ಕಲಾಪವನ್ನು ಮುಂದೂಡಲಾಗಿತ್ತು. ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿ ಹಾಗೂ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯ ಪರಿಶೀಲನೆಗಾಗಿ ನ್ಯಾಯಾಧೀಶರು ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ 13 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಸದ್ಯ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

You cannot copy content of this page

Exit mobile version