Home ಬ್ರೇಕಿಂಗ್ ಸುದ್ದಿ ನೇಪಾಳ ಜೆನ್ ಝೆಡ್ ಪ್ರತಿಭಟನೆ: ಪ್ರಧಾನಿ ಕೆಪಿ ಓಲಿ ರಾಜೀನಾಮೆ

ನೇಪಾಳ ಜೆನ್ ಝೆಡ್ ಪ್ರತಿಭಟನೆ: ಪ್ರಧಾನಿ ಕೆಪಿ ಓಲಿ ರಾಜೀನಾಮೆ

0

ನೇಪಾಳದ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, ಜೆನ್ ಝಡ್ ನೇತೃತ್ವದಲ್ಲಿ ಪ್ರತಿಭಟನೆಗಳು ದೇಶಾದ್ಯಂತ ಹಿಂಸಾತ್ಮಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೇಪಾಳ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.

ವರದಿ ಪ್ರಕಾರ, ಓಲಿ ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿ, ಹದಗೆಡುತ್ತಿರುವ ಪರಿಸ್ಥಿತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಒತ್ತಾಯಿಸಿದರು. ಓಲಿ ಅಧಿಕಾರವನ್ನು ತ್ಯಜಿಸಿದರೆ ಮಾತ್ರ ಸೇನೆಯು ದೇಶವನ್ನ ಸ್ಥಿರಗೊಳಿಸಲು ಸಾಧ್ಯ ಎಂದು ಜನರಲ್ ಸಿಗ್ಡೆಲ್ ಪ್ರತಿಕ್ರಿಯಿಸಿದ ನಂತರ ಓಲಿಯವರು ರಾಜೀನಾಮೆ ನೀಡಿದ್ದಾರೆ.

ಹಾಗೆಯೇ ಪ್ರಧಾನಿಯವರು ಬಲುವತಾರ್‌’ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಸುರಕ್ಷಿತ ಮಾರ್ಗವನ್ನ ಖಚಿತಪಡಿಸಿಕೊಳ್ಳಲು ಸೇನೆಯ ಸಹಾಯವನ್ನ ಕೋರಿದ್ದಾರೆ ಮತ್ತು ದೇಶವನ್ನ ತೊರೆಯಲು ಸಹಾಯವನ್ನ ಕೋರಿದ್ದಾರೆ. ಓಲಿ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ದುಬೈಗೆ ಹಾರಲು ಯೋಜಿಸುತ್ತಿದ್ದಾರೆ, ಖಾಸಗಿ ವಿಮಾನಯಾನ ಸಂಸ್ಥೆ ಹಿಮಾಲಯ ಏರ್‌ಲೈನ್ಸ್ ಸನ್ನದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

You cannot copy content of this page

Exit mobile version