Home ಬೆಂಗಳೂರು ನಟ ಚೇತನ್ ಅಹಿಂಸಾ ಪೋಸ್ಟ್ ಗೆ ಪತ್ನಿಯಿಂದಲೇ ವ್ಯಂಗ್ಯ; ನಿಮ್ಮ ಪೋಸ್ಟ್ ತೇಜಸ್ವಿ ಸೂರ್ಯ ಅವರ...

ನಟ ಚೇತನ್ ಅಹಿಂಸಾ ಪೋಸ್ಟ್ ಗೆ ಪತ್ನಿಯಿಂದಲೇ ವ್ಯಂಗ್ಯ; ನಿಮ್ಮ ಪೋಸ್ಟ್ ತೇಜಸ್ವಿ ಸೂರ್ಯ ಅವರ ಬರಹದಂತಿದೆ ಎಂದ ಚೇತನ್ ಪತ್ನಿ ಮೇಘಾ

0

ಕನ್ನಡ ಚಿತ್ರರಂಗದ ನಟ ಚೇತನ್ ಅಹಿಂಸಾ ಅವರು ಡಿಲಿಮಿಟೇಷನ್ ಮಸೂದೆಯ ಪರವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ಅವರ ಪತ್ನಿ ಮೇಘಾ ಅವರೇ ವ್ಯಂಗ್ಯಬರಿತವಾಗಿ ಧ್ವನಿ ಎತ್ತಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಚೇತನ್ ಅಹಿಂಸಾ ನಿಲುವೇನು?
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಲಿಮಿಟೇಷನ್ ಮಸೂದೆಯನ್ನು ಸಾಂಕೇತಿಕವಾಗಿ ಸುಟ್ಟುಹಾಕಿದ ಘಟನೆಯನ್ನು ಖಂಡಿಸಿದ ನಟ ಚೇತನ್ ಅಹಿಂಸಾ, ಇದು “ನಿಜವಾದ ಪ್ರತಿಭಟನೆಯಲ್ಲ, ಬದಲಾಗಿ ಚುನಾವಣಾ ಕಾಲದ ರಾಜಕೀಯ ಸ್ಟಂಟ್” ಎಂದು ತಮ್ಮ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

ಡಿಲಿಮಿಟೇಷನ್ ಮಸೂದೆ ದೇಶದ ಜನತೆಗೆ, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಪೂರಕವಾಗಿದೆ ಎಂದು ವಾದಿಸಿದ ಚೇತನ್, ಮಸೂದೆಯ ಪ್ರಯೋಜನಗಳನ್ನು ಈ ರೀತಿ ವಿವರಿಸಿದ್ದಾರೆ:
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಸಂಸದ (MP) ಸ್ಥಾನಗಳನ್ನು ಸುಮಾರು 50% ಹೆಚ್ಚಿಸಲು ಯೋಜಿಸಿದೆ
ರಾಜ್ಯಗಳ ನಡುವಿನ ಸ್ಥಾನ ಹಂಚಿಕೆ ಅದೇ ಅನುಪಾತದಲ್ಲಿ ಮುಂದುವರಿಯಲಿದೆ. ಪ್ರತಿ ಕ್ಷೇತ್ರ ಚಿಕ್ಕದಾಗುವುದರಿಂದ ಜನರ ಸಮಸ್ಯೆಗಳಿಗೆ ಹೆಚ್ಚಿನ ಗಮನ ನೀಡಲು ಸಾಧ್ಯ. ಮಹಿಳಾ ಮೀಸಲು ಮಸೂದೆ (WRB) ಜಾರಿಗೂ ಅನುಕೂಲ “ಒಟ್ಟಾರೆ ಇದು ಎಲ್ಲರಿಗೂ ಲಾಭವಾಗುವ ಕ್ರಮ” ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ಪತ್ನಿ ಮೇಘಾ ಪ್ರತಿಕ್ರಿಯೆ
ಪತಿಯ ಈ ಪೋಸ್ಟ್‌ಗೆ ವ್ಯಂಗ್ಯಬರಿತ ನಿಲುವು ತಳೆದ ಮೇಘಾ, “ನಿಮ್ಮ ಈ ಪೋಸ್ಟ್ ಓದುತ್ತಿದ್ದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಬರಹ ಓದುತ್ತಿರುವಂತೆ ಭಾಸವಾಗುತ್ತಿದೆ” ಎಂದು ನೇರವಾಗಿ ತಿಳಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಹಿನ್ನೆಲೆ
ಡಿಲಿಮಿಟೇಷನ್ ವಿಷಯವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ಸೂಕ್ಷ್ಮ ರಾಜಕೀಯ ವಿಷಯವಾಗಿ ಮಾರ್ಪಟ್ಟಿದ್ದು, ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಸಂಸತ್ ಸ್ಥಾನ ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಚೇತನ್ ಅಹಿಂಸಾ ಅವರ ಪೋಸ್ಟ್ ಮತ್ತು ಅವರ ಪತ್ನಿ ಮೇಘಾ ಅವರ ವ್ಯತಿರಿಕ್ತ ಕಾಮೆಂಟ್ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಈ ಘಟನೆ ಚೇತನ್ ಕುಟುಂಬದೊಳಗೇ ಚೇತನ್ ನಿಲುವನ್ನು ವ್ಯಂಗ್ಯವಾಗಿ ಕಂಡಿರುವುದು ಅಪರೂಪದ ನಿದರ್ಶನವಾಗಿ ಗಮನ ಸೆಳೆದಿದೆ.

You cannot copy content of this page

Exit mobile version