ಹಾಸನ : ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರವೇಶಾತಿ ಅಭಿಯಾನ ಶೀರ್ಷಿಕೆಯಡಿ ಗ್ರಾಮಾಂತರ ಪ್ರದೇಶದಲ್ಲಿ ಪಿಯುಸಿ ಓದಿರುವ ವಿದ್ಯಾರ್ಥಿಗಳಿಗೆ ಪದವಿ ಕಾಲೇಜುಗಳಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ನೀಡಬೇಕು ಉದ್ದೇಶದಲ್ಲಿ ಹೊಸ ಕೋರ್ಸ್ಗಳನ್ನು ಪ್ರಸಕ್ತ ಸಾಲಿನಲ್ಲಿ ಆರಂಭ ಮಾಡಲಾಗಿದೆ. ಉದ್ಯೋಗಕ್ಕೆ ಪೂರಕ ಕೌಶಲ್ಯ ಆಧಾರಿತ ವಾಣಿಜ್ಯ ಕೋರ್ಸ್ಗೆ ಪ್ರವೇಶಾತಿ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಇರ್ಷಾದ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪದವಿ ಪೂರ್ವ ವಾಣಿಜ್ಯ ವಿಭಾಗದ ಪಿಯುಸಿ ವಿದ್ಯಾರ್ಥಿಗಳಿಗೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ 4 ವರ್ಷ
ಅವಧಿಯ ಕೌಶಲ್ಯ ಹಾಗೂ ಉದ್ಯೋಗ ಆಧಾರಿತ ನೂತನ ಬಿ.ಕಾಂ ಕೋರ್ಸ್ಗೆ ಕಳೆದ ಸಾಲಿನಿಂದ ಪ್ರವೇಶಾತಿ ಆರಂಭಿಸಿಲಾಗಿದೆ ಎಂದ ಅವರು, ಕೌಶಲ್ಯ ಆಧಾರಿತ ಬಿ.ಕಾಂ. ಕೋರ್ಸ್
ಕೌಶಲ್ಯ ಆಧಾರಿತ ವಾಣಿಜ್ಯ ಕೋರ್ಸ್ ಪ್ರವೇಶಾತಿ ಆರಂಭ ನಿಂದ ವಿದ್ಯಾರ್ಥಿಗಳಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಉಪಯೋಗವಾಗಲಿದೆ ಎಂದರು. 4 ವರ್ಷ ಅವಧಿಯ ಕೋರ್ಸ್
ನಲ್ಲಿ ಮೊದಲ 2 ವರ್ಷ ಅವಧಿ. ವಿದ್ಯಾರ್ಥಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲಿದ್ದು ಇನ್ನುಳಿದ 2 ವರ್ಷ ಕಾಲೇಜಿನೊಂದಿಗೆ MOU ಮಾಡಿಕೊಂಡಿರುವ ಕಂಪನಿಗಳಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.
ಕೆಲಸದ ಅವಧಿಯಲ್ಲಿ ವಿದ್ಯಾರ್ಥಿಗೆ ಸ್ಟೇಫಂಡ್ ಕೂಡ ನೀಡಲಾಗುವುದು. ಕಂಪನಿಗಳಿಂದ ವಿದ್ಯಾರ್ಥಿಯ ಕರ್ತವ್ಯದ ರಿಪೊರ್ಟ್ ಅನ್ನು ಕಾಲೇಜಿಗೆ ನೀಡುತ್ತಾರೆ ತದನಂತರ ಕರ್ತವ್ಯದ ಆಧಾರದ ಮೇಲೆ ವಿದ್ಯಾರ್ಥಿಗೆ 4 ವರ್ಷ ಅವಧಿಯ ಪದವಿ ನೀಡಲಾಗುವುದು ಎಂದರು. ವಿದ್ಯಾರ್ಥಿಯ ಕೆಲಸ ಕಂಪನಿಗಳಿಗೆ ಇಷ್ಟವಾಗಿದ್ದರೆ ಆ ವಿದ್ಯಾರ್ಥಿಯನ್ನು ಪದವಿ ನಂತರ ಪೂರ್ಣಾವಧಿಗೆ ನೇಮಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಇದರಿಂದ ತಮ್ಮ ಕಲಿಕೆಯ ಅವಧಿಯಲ್ಲಿಯೇ ಉದ್ಯೋಗ ಪಡೆದುಕೊಳ್ಳಲು ಸಹಾಯವಾಗಲಿದೆ ಎಂದರು. ಪ್ರಸಕ್ತ ಸಾಲಿನಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಲಭ್ಯವಿದ್ದು, ಹೆಚ್ಚಿನ ಅರ್ಜಿಗಳು ಕಂಡು ಬಂದರೆ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು. ಕೋರ್ಸ್ ಸಂಪೂರ್ಣ ಉಚಿತವಾಗಿದ್ದು ವಾಣಿಜ್ಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ ಕಾಲೇಜಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು. ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಮೇ.24 ಶನಿವಾರ ಮತ್ತು 15ರ ಭಾನುವಾರದಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ಖೋಖೋ ಹಾಗೂ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು..
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪರೀಕ್ಷಕ ನಿಯಂತ್ರಕ ಮುರುಳಿದರ್, ಪಾರ್ಥೇಶ್ ಇತರರು ಉಪಸ್ಥಿತರಿದ್ದರು.