Friday, September 19, 2025

ಸತ್ಯ | ನ್ಯಾಯ |ಧರ್ಮ

ಆರ್ಥಿಕ ತಜ್ಞ ಅಮರ್ಥ್ಯ ಸೇನ್ ಸಾವಿನ ಸುದ್ದಿ ; ಸುಳ್ಳು ಮಾಹಿತಿ ಎಂದ ಪುತ್ರಿ

ಭಾರತದ ಶ್ರೇಷ್ಠ ಆರ್ಥಿಕ ತಜ್ಞ ಅಮರ್ತ್ಯ ಸೇನ್‌ (89) ಅವರು ಮಂಗಳವಾರ ನಿಧನರಾಗಿದ್ದಾರೆ ಎಂಬ ಸುದ್ದಿ ಈ ಬಾರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞೆ ಕ್ಲಾಡಿಯಾ ಗೋಲ್ಡಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಸುದ್ದಿ ಸುಳ್ಳು ಎಂದು ಸೇನ್ ಪುತ್ರಿ ನಂದನಾ ದೇಬ್ ಸೇನ್ ಸ್ಪಷ್ಟಪಡಿಸಿದ್ದಾರೆ.

89 ವರ್ಷದ ಅಮೃರ್ತ್ಯ ಸೇನ್ ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲಿದ್ದರು. ತಪ್ಪು ಮಾಹಿತಿಗಳ ಕಾರಣಕ್ಕೆ ಆರ್ಥಿಕ ತಜ್ಞೆ ಕ್ಲಾಡಿಯಾ ಗೋಲ್ಡಿನ್ ಈ ರೀತಿಯ ಮಾಹಿತಿ ಹಂಚಿಕೊಂಡಿರಬಹುದು ಎಂದು ಅಮರ್ಥ್ಯ ಸೇನ್ ಪುತ್ರಿ ನಂದನಾ ದೇಬ್ ಸೇನ್ ಅಭಿಪ್ರಾಯ ಪಟ್ಟಿದ್ದಾರೆ.

ಚಿಂತಕ, ಅರ್ಥಶಾಸ್ತ್ರಜ್ಞ, ಸಾಮಾಜಿಕ ತತ್ವಶಾಸ್ತ್ರಕ್ಕೆ ಕೊಡುಗೆ ನೀಡುವ ಮೂಲಕ ದೇಶ ವಿದೇಶದಲ್ಲಿ ಅಮರ್ತ್ಯ ಸೇನ್ ಪ್ರಸಿದ್ಧಿಯಾಗಿದ್ದಾರೆ.  ಇಂಗ್ಲೆಂಡ್ ಹಾಗೂ ಅಮೆರಿಕದಲ್ಲಿ ಅರ್ಥಶಾಸ್ತ್ರ ಪ್ರೋಫೆಸರ್ ಆಗಿ ಸೇವೆ ಸಲ್ಲಿಸಿರುವ ಅಮರ್ತ್ಯ ಸೇನ್ 1933ರರ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಹುಟ್ಟಿದರು. 1998ರಲ್ಲಿ ಅರ್ಥಶಾಸ್ತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನೋಬೆಲ್ ಮಾತ್ರವಲ್ಲದೆ ಭಾರತ ಸರ್ಕಾರ ಅರ್ಥಶಾಸ್ತ್ರದಲ್ಲಿ ಅವರ ಸಾಧನೆ ನೆನೆದು ಸರ್ಕಾರದ ಅತ್ಯುನ್ನತ ಪುರಸ್ಕಾರ ಭಾರತ ರತ್ನ ಕೂಡಾ ನೀಡಿ ಗೌರವಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page