Thursday, November 6, 2025

ಸತ್ಯ | ನ್ಯಾಯ |ಧರ್ಮ

ರಾಹುಲ್ ಗಾಂಧಿಯವರ ಆರೋಪ ತೀರಾ ‘ಚೈಲ್ಡೀಶ್’: ನಿಖಿಲ್ ಕುಮಾರಸ್ವಾಮಿ

ವೋಟ್ ಕಳ್ಳತನ (ವೋಟ್‌ಚೋರಿ) ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಹುಲ್ ಗಾಂಧಿಯವರು ವೋಟ್‌ಚೋರಿ ಕುರಿತು ಹೇಳಿರುವುದು ತುಂಬಾ “ಚೈಲ್ಡೀಶ್” (ಬಾಲಿಶ) ಮಾತು.

“ಬಿಹಾರ ಚುನಾವಣೆಯಲ್ಲಿ ಅವರು ಆರ್‌ಜೆಡಿ (RJD) ಜೊತೆಗೂಡಿ ಸ್ಪರ್ಧಿಸಿದ್ದಾರೆ. ಈಗ ಅದೇ ಚುನಾವಣೆಯಲ್ಲಿ ವೋಟ್‌ಚೋರಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಇದು ರಾಜಕೀಯ ಪ್ರೌಢಿಮೆಗೆ ವಿರುದ್ಧವಾದ, ಬಾಲಿಶ ಹೇಳಿಕೆ,” ಎಂದು ಅವರು ಟೀಕಿಸಿದರು.

ಪ್ರತಿ ಚುನಾವಣೆಯ ಫಲಿತಾಂಶ ತಮ್ಮ ಪಕ್ಷಕ್ಕೆ ಅನುಕೂಲಕರವಾಗದಿದ್ದರೆ ತಕ್ಷಣ ಯಂತ್ರ ದೋಷ, ವೋಟ್‌ಚೋರಿ, ಕೌಂಟಿಂಗ್ ತೊಡಕು ಎಂಬ ಆರೋಪ ಮಾಡುವುದು ಕಾಂಗ್ರೆಸ್‌ನ ಹಳೆಯ ಅಭ್ಯಾಸ. ರಾಹುಲ್ ಗಾಂಧಿಯವರು ಇಂತಹ ಹೇಳಿಕೆಗಳಿಗಿಂತ ಯುವಕರ ಸಮಸ್ಯೆ, ನಿರುದ್ಯೋಗ, ರೈತರ ಸಮಸ್ಯೆ ಇತ್ಯಾದಿಗಳ ಬಗ್ಗೆ ಮಾತನಾಡಬೇಕು ಎಂದು ನಿಖಿಲ್ ಸಲಹೆ ನೀಡಿದರು.

ಇದಲ್ಲದೆ, ಜೆಡಿಎಸ್ ಪಕ್ಷವು ಸದಾ ಜನಪ್ರತಿನಿಧಿತ್ವದ ಗೌರವ ಕಾಪಾಡುವ ನಿಲುವನ್ನು ಹೊಂದಿದೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page