Home ಬ್ರೇಕಿಂಗ್ ಸುದ್ದಿ ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ವಜಾ

ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ವಜಾ

0

ಲೋಕಸಭೆ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ತಂದಿದ್ದ ಅವಿಶ್ವಾಸ ನಿರ್ಣಯವನ್ನು ಬುಧವಾರ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ತಿರಸ್ಕರಿಸಲಾಯಿತು. ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರು ಹಲವು ವಿರೋಧ ಪಕ್ಷದ ಸಂಸದರ ಬೆಂಬಲದೊಂದಿಗೆ ಈ ನಿರ್ಣಯವನ್ನು ಮಂಡಿಸಿದ್ದರು.

ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಮೂಲಕ ವಿರೋಧ ಪಕ್ಷಗಳು ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಪ್ರಶ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

“ಸಂವಿಧಾನವು ಸ್ಪೀಕರ್‌ಗೆ ಸದನದ ಮಧ್ಯವರ್ತಿಯ ಪಾತ್ರವನ್ನು ನೀಡಿದೆ. ಆ ಮಧ್ಯವರ್ತಿಯ ಮೇಲೆಯೇ ನೀವು ಅನುಮಾನ ವ್ಯಕ್ತಪಡಿಸಿದ್ದೀರಿ. ಕಳೆದ 75 ವರ್ಷಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ನಮ್ಮ ಸಂಸತ್ತಿನ ವ್ಯವಸ್ಥೆ ಪ್ರಜಾಪ್ರಭುತ್ವದ ಅಡಿಪಾಯವನ್ನು ಅತ್ಯಂತ ಬಲವಾಗಿ ನಿರ್ಮಿಸಿದೆ. ಆದರೆ ವಿರೋಧ ಪಕ್ಷಗಳು ಆ ಬಲವಾದ ಅಡಿಪಾಯದ ವಿಶ್ವಾಸವನ್ನೇ ಪ್ರಶ್ನಿಸುವ ಕೆಲಸ ಮಾಡಿವೆ,” ಎಂದು ಅಮಿತ್ ಶಾ ಆರೋಪಿಸಿದರು.

You cannot copy content of this page

Exit mobile version