Home ದೆಹಲಿ ಯುಪಿಐ ವಹಿವಾಟು ಎಂಡಿಆರ್ ಶುಲ್ಕ ನಿರ್ಧಾರ ಹಿಂಪಡೆಯುವ ಪ್ರಶ್ನೆಯೇ ಇಲ್ಲ – ಕೇಂದ್ರ ಸರ್ಕಾರ

ಯುಪಿಐ ವಹಿವಾಟು ಎಂಡಿಆರ್ ಶುಲ್ಕ ನಿರ್ಧಾರ ಹಿಂಪಡೆಯುವ ಪ್ರಶ್ನೆಯೇ ಇಲ್ಲ – ಕೇಂದ್ರ ಸರ್ಕಾರ

0

ನವದೆಹಲಿ : 2000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ (UPI transactions) ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಈ ನಿರ್ಧಾರವನ್ನು ದೀರ್ಘಕಾಲದ ಆಲೋಚನೆಯ ನಂತರವೇ ತೆಗೆದುಕೊಳ್ಳಲಾಗಿದ್ದು, ಇದನ್ನು ಮರುಪರಿಶೀಲಿಸುವುದಿಲ್ಲ ಎಂದು ಸರ್ಕಾರ (Union government) ತಿಳಿಸಿದೆ.

ಈ ಹೊಸ ನಿಯಮದಿಂದ ಶೇಕಡಾ 96 ರಷ್ಟು ವಹಿವಾಟುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೇವಲ ಶೇಕಡಾ 4 ರಷ್ಟು ದೊಡ್ಡ ಪ್ರಮಾಣದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಶೇಕಡಾ 0.4 ರಷ್ಟು ಶುಲ್ಕ ಅನ್ವಯವಾಗಲಿದೆ. ಇದು ಸಾಮಾನ್ಯ ಗ್ರಾಹಕರ ಮೇಲಾಗಲಿ ಅಥವಾ ಸಣ್ಣ ವ್ಯಾಪಾರಿಗಳ ಮೇಲಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಹಣ ರವಾನೆ ಹಾಗೂ 2000 ರೂಪಾಯಿವರೆಗಿನ ಪಾವತಿಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತವಾಗಿಡಲು ಹಾಗೂ ಬ್ಯಾಂಕಿಂಗ್ ಮೂಲಸೌಕರ್ಯವನ್ನು ಬಲಪಡಿಸಲು ಈ ಶುಲ್ಕ ಅಗತ್ಯವಾಗಿದೆ. ವಿಪಕ್ಷಗಳು ಇದರ ಬಗ್ಗೆ ಸಾರ್ವಜನಿಕರಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದು ತೆರಿಗೆಯಲ್ಲ ಬದಲಾಗಿ ಡಿಜಿಟಲ್ ವ್ಯವಸ್ಥೆಯ ನಿರ್ವಹಣೆಗೆ ಬಳಸುವ ಶುಲ್ಕವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

You cannot copy content of this page

Exit mobile version