ಉದ್ಯಮಿ ರತನ್ ಟಾಟಾ ನಿಧನದ ನಂತರ ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷರ ಆಯ್ಕೆ ನಡೆದದ್ದು, ರತನ್ ಟಾಟಾ ಅವರ ಸಹೋದರ ನೋಯೆಲ್ ಟಾಟಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಇಂದು ನಡೆದ ಟಾಟಾ ಟ್ರಸ್ಟ್ ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನೋಯೆಲ್ ಟಾಟಾ ಅವರಿಗೆ ಟಾಟಾ ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಒದಗಿದೆ ಎಂದು ತಿಳಿದು ಬಂದಿದೆ.
ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕ ನೋಯೆಲ್ ಎನ್ ಟಾಟಾ ಅವರು ನಾಲ್ಕು ದಶಕಗಳಿಂದ ಟಾಟಾ ಗ್ರೂಪ್‌ನಲ್ಲಿದ್ದಾರೆ. ಅವರು ನೇವಲ್ ಎಚ್.ಟಾಟಾ ಮತ್ತು ಸಿಮೋನ್ ಎನ್.ಟಾಟಾ ಅವರ ಪುತ್ರರಾಗಿದ್ದಾರೆ. ಅವರು ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ ಮಂಡಳಿಗಳಲ್ಲಿ ಟ್ರಸ್ಟಿಯಾಗಿದ್ದಾರೆ.
