Home ಬ್ರೇಕಿಂಗ್ ಸುದ್ದಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ : ಕಾನೂನು ಕಾಲೇಜಿನ ಮೇಲೆ ಕ್ರಮಕ್ಕೆ NSUI ಆಗ್ರಹ

ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ : ಕಾನೂನು ಕಾಲೇಜಿನ ಮೇಲೆ ಕ್ರಮಕ್ಕೆ NSUI ಆಗ್ರಹ

0

ತುಮಕೂರು : ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರಕ್ಕೆ ಮುಂದಾದ ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲರು ಮತ್ತು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತುಮಕೂರು ಗ್ರಾಮಾಂತರ NSUI ಘಟಕ ಸರ್ಕಾರಕ್ಕೆ ಮನವಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಪತ್ರದಲ್ಲಿ ತುಮಕೂರು ಗ್ರಾಮಾಂತರ ಘಟಕದ NSUI ಅಧ್ಯಕ್ಷ ತೇಜಸ್ ಗೌಡ ಈ ವಿಚಾರವನ್ನು ಪ್ರಸ್ತಾಪಿಸಿ ವಿವರಿಸಿದ್ದಾರೆ.

ತುಮಕೂರಿನ ವಿದ್ಯೋದಯ ಕಾನೂನು ಕಾಲೇಜು ಆಯೋಜಿಸಿರುವ ಈ ಒಂದು ಅಣಕು ಕಾಲ್ಪನಿಕ ಕೋರ್ಟ್ ಸನ್ನಿವೇಶದಲ್ಲಿ ಸರ್ಕಾರದ ಯೋಜನೆಗಳನ್ನು freebies ಎಂದು ಉಲ್ಲೇಖಿಸಿ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳಿಂದ ಆಗಬಹುದಾದ ದುಷ್ಪರಿಣಾಮದ ಬಗ್ಗೆ ಕಾನೂನು ವಿದ್ಯಾರ್ಥಿಗಳು ವಾದಿಸಬೇಕು ಎಂದು ಕಾನೂನು ಕಾಲೇಜು ಆದೇಶ ಹೊರಡಿಸಿದೆ.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಬೀಳಬಹುದಾದ ಹೊರೆಯನ್ನು ಉಲ್ಲೆಖಿಸಿ ಈಗಾಗಲೇ ರಿಟ್ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ವಾದ ಮಂಡಿಸಲು ತಯಾರಾಗಬೇಕು ಎಂದು ವಿದ್ಯಾರ್ಥಿಗಳಿಗೆ ನೀಡಿದ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಸರ್ಕಾರದ ಕಾನೂನು ಮಂತ್ರಿಗಳು ಇತ್ತೀಚೆಗೆ ಕಾನೂನು ವಿಶ್ವವಿದ್ಯಾಲಯಕ್ಕೆ ನೇಮಕ ಮಾಡಿದ ಸಿಂಡಿಕೇಟ್ ಸದಸ್ಯರು, ಹೈಕೋರ್ಟ್‌ಗೆ ನೇಮಕ ಮಾಡಿದ ಸರ್ಕಾರಿ ವಕೀಲರು ಬಹುತೇಕ ಬಿಜೆಪಿ ಬೆಂಬಲಿಗರು ಇದರ ಪರಿಣಾಮವಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತವೆ. ಕಳೆದ ಆಗಸ್ಟ್ 12,13 ರಂದು ಬೆಳಗಾವಿ ಚಿಕ್ಕೋಡಿ ಕೆಎಲ್ಇ ಕಾನೂನು ಕಾಲೇಜಿನಲ್ಲಿ ಇದೇ ವಿಷಯದ ಮೇಲೆ ಕನ್ನಡ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬಿಟ್ಟಿ ಭಾಗ್ಯ ಎಂದು ಪದ ಬಳಸಲಾಗಿದ್ದನ್ನು ಎನ್‌ಎಸ್‌ಯುಐ ಹುಡುಗರಾದ ಚೇತನ್ ಮತ್ತು ಇತರರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

ಸಧ್ಯ ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ವಿರೋಧಿಸುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಗಿದೆ. ಕಾನೂನು ಸಚಿವರು ತಮ್ಮ ಅಧೀನದಲ್ಲಿ ಬರುವ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಮತ್ತು ಸಿಂಡಿಕೇಟ್ ಸದಸ್ಯರಿಗೆ ಸರ್ಕಾರದ ಸವಲತ್ತುಗಳನ್ನು ನೀಡಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳನ್ನು ತಯಾರಿಸುವ ಹೊಣೆಗಾರಿಕೆ ನಿರ್ವಹಿಸುವುದನ್ನು ತಡೆಯಬೇಕು ಎಂದು NSUI ಘಟಕ ಆಗ್ರಹಿಸಿದೆ.

You cannot copy content of this page

Exit mobile version