2025ರ ಜೂನ್ ಅಂತ್ಯದ ವೇಳೆಗೆ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ರೌಡಿಶೀಟರ್‌ಗಳ ಸಂಖ್ಯೆ 39,698ಕ್ಕೆ ತಲುಪಿದೆ. ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿರಂತರ ಪ್ರಯತ್ನದಲ್ಲಿರುವಾಗ ಹೊರಬಂದ ಅಂಕಿ ಅಂಶಗಳ ಆಧಾರದಲ್ಲಿ ಈ ಒಂದು ಆತಂಕಕಾರಿ ಸಂಗತಿ ಹೊರಬಿದ್ದಿದೆ.
ಈ ಅಂಕಿಅಂಶಗಳು ರಾಜ್ಯದ ಇತ್ತೀಚಿನ ಅಪರಾಧ ವರ್ಗೀಕರಣ ವರದಿಯಲ್ಲಿನ ಅಂಕೆ-ಸಂಖ್ಯೆಗಳ ಆಧಾರದ ಮೇಲೆ ಪ್ರಕಟಗೊಂಡಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರು ನಗರದಲ್ಲೇ ಒಟ್ಟು 6,117 ರೌಡಿಶೀಟರ್‌ಗಳು ಪೊಲೀಸ್ ದಾಖಲೆಗಳಲ್ಲಿದ್ದಾರೆ. ಇದರಿಂದ ಬೆಂಗಳೂರು ನಗರದಲ್ಲಿ ಅಪರಾಧಿಗಳ ಚಟುವಟಿಕೆ ಎಷ್ಟು ವ್ಯಾಪಕವಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿದಂತಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಸ್ತವ್ಯ, ವಲಸೆ, ಬಡಾವಣೆ ವ್ಯಾಪ್ತಿ ಹಾಗೂ ಜಾಲದ ಮೂಲಕ ನಡೆಯುವ ಗುಂಪು ಗಲಾಟೆಗಳಿಗೆ ಇದೊಂದು ಪ್ರೇರಕವಾಗಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ನಂತರ ಕಲಬುರ್ಗಿ ಜಿಲ್ಲೆ 3,982 ರೌಡಿಶೀಟರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ ಗ್ಯಾಂಗ್ ಸಕ್ರಿಯತೆ, ಭೂಮಿ ವಿವಾದಗಳು ಹಾಗೂ ಸಾಮಾಜಿಕ-ರಾಜಕೀಯ ಹಿನ್ನೆಲೆಯಲ್ಲಿ ಗಲಾಟೆಗಳನ್ನಿಟ್ಟುಕೊಂಡಂತೆ ಈ ಸಂಖ್ಯೆ ಆತಂಕಕಾರಿ ಹಂತ ತಲುಪಿದೆ.
ಇಷ್ಟು ರೌಡಿಶೀಟರ್ ಗಳ ಪಟ್ಟಿಯಲ್ಲಿ 23,836 ರೌಡಿಶೀಟರ್ ಗಳು ನಿರಂತರ ಅಪರಾಧಗಳಲ್ಲಿ ತೊಡಗುವವರಾಗಿದ್ದು, ಇವರು ಬಹುಪಾಲು ಠಾಣೆಗಳಲ್ಲೂ “ರೌಡಿಶೀಟರ್” ಪಟ್ಟಿಯಲ್ಲಿ ಇದ್ದಾರೆ. ಇಂಥವರ ಮೇಲೆ ನಿಯಂತ್ರಣ ತರಲು ಸರ್ಕಾರ KCOCA, ಗೂಂಡಾ ಕಾಯ್ದೆ, ಮತ್ತು OV (Organised Violence) ರೌಡಿಶೀಟ್ ಕ್ರಮಗಳನ್ನು ಜಾರಿಗೆ ತರುತ್ತಿದೆ.
ಕರ್ನಾಟಕದ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ 1,500ಕ್ಕೂ ಹೆಚ್ಚು ಆರೋಪಿಗಳು ದಾಖಲಾಗಿದ್ದಾರೆ. ಇವು ಯಾವುವೂ ಸಹ ಅಂದಾಜು ಅಂಕಿ ಅಂಶಗಳಾಗಿರದೇ ಪೊಲೀಸ್ ಇಲಾಖೆಯ ಅಧಿಕೃತ ಅಂಕಿ ಅಂಶಗಳಾಗಿದೆ.
ರಾಜ್ಯಾದ್ಯಾಂತ ಪೊಲೀಸ್ ಇಲಾಖೆ ಈಗ ರೌಡಿಶೀಟರ್‌ಗಳ ಮೇಲ್ವಿಚಾರಣೆ ಹೆಚ್ಚಿಸುವ, ಡಿಜಿಟಲ್ ಮೇಲ್ವಿಚಾರಣಾ ವ್ಯವಸ್ಥೆ, ಮತ್ತು ಪ್ರತಿದಿನದ ಚಟುವಟಿಕೆಯನ್ನು ನೋಟ ಹಾಕುವ ಯೋಜನೆಗಳನ್ನು ಜಾರಿಗೆ ತಂದಿದೆ. ಪತ್ತೆದಾರಿ ವಿಭಾಗಗಳು ಹಾಗೂ ಖಚಿತ ಮಾಹಿತಿದಾರರ ಮೂಲಕ ಇಂತಹ ಜನರ ಹಾದಿಗಳನ್ನು ಹತ್ತಿ ಹಿಡಿಯಲಾಗುತ್ತಿದೆ.
ಇತರೆ ಪ್ರಮುಖ ಜಿಲ್ಲೆಗಳಲ್ಲಿನ ರೌಡಿಶೀಟರ್‌ಗಳ ಸಂಖ್ಯೆ
ದಕ್ಷಿಣ ಕನ್ನಡ – 2,216
ಮೈಸೂರು – 2,113
ಚಿಕ್ಕಬಳ್ಳಾಪುರ – 1,978
ಬಳ್ಳಾರಿ – 1,798
ದಾವಣಗೆರೆ – 1,698
ತುಮಕೂರು – 1,668
ವಿಜಯಪುರ – 1,657