ಕಲಬುರಗಿ : ಚಿತ್ತಾಪುರದಲ್ಲಿ ನವಂಬರ್ 2 ರಂದು ಆರ್‌ಎಸ್ಎಸ್ (RSS) ಪಥ ಸಂಚಲನ ನಡೆಸೋ ವಿಚಾರ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಅದೇ ದಿನ ಇನ್ನೂ (Kalburgi) ಐದಾರು ಸಂಘಟನೆಗಳು ಜಾಥಾ, ಮೆರವಣಿಗೆಗೆ ಅನುಮತಿ ಕೊಡಿ ಎಂದಿವೆ. ಹೀಗಾಗಿ ಅಕ್ಟೋಬರ್ 28ರವರೆಗೆ ಶಾಂತಿ ಸಭೆ ನಡೆಸಲು ಹೈಕೋರ್ಟ್ (High Court) ಸೂಚಿಸಿದೆ.
ವಿಶೇಷ ಪೀಠವು ಭಾನುವಾರ ವಿಚಾರಣೆ ನಡೆಸಿ, ನವೆಂಬರ್ 2 ಕ್ಕೆ ಪಥಸಂಚಲನ ನಡೆಸಲು ಸೂಚಿಸಿತ್ತು. ಅಲ್ಲದೇ ಜಿಲ್ಲಾಧಿಕಾರಿಗೆ ಮನವಿ ನೀಡಲು ಸೂಚಿಸಿತ್ತು. ಅದರಂತೆ ಮನವಿ ನೀಡಿದ್ದೇವೆ. ಎಲ್ಲಾ ಸಿದ್ಧತೆಗಳು ಆಗಿವೆ. ರೂಟ್ ಮ್ಯಾಪ್ ಸಹ ನೀಡಿದ್ದೇವೆ ಎಂದು RSS ಪರ ವಕೀಲ ಎಂ ಅರುಣ್ ಶ್ಯಾಮ್ ಹೇಳಿದರು. ಬಳಿಕ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿ ಓದಿದ ಅಡ್ವೊಕೇಟ್ ಜನರಲ್. ಇದು ಹೆಚ್ಚು ಜನಸಂದಣಿ ಇರುವ ಪ್ರದೇಶ ಎಂದು ಹೇಳಲಾಗಿದೆ. ಇಲ್ಲಿ ಮೆರವಣಿಗೆ, ಸಭೆ ನಡೆಸಲು ಅನುಮತಿಸಲಾಗದು ಎಂದು ವರದಿಯಲ್ಲಿ ಹೇಳಲಾಗಿದೆ. ಜನಸಂದಣಿ ಉಂಟಾಗಲಿದೆ ಎಂದೂ ವರದಿಯಾಗಲಿದೆ ಎಂದರು.ಯಾವುದೇ ರೀತಿ ಸಭೆ, ಸಮಾರಂಭ, ಪಥಸಂಚಲನಕ್ಕೆ ಅನುಮತಿಸಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಎಜಿ ಹೇಳಿದ್ರೆ, ಅದರ ಅರ್ಥ ಏನು? ಎಂದು ಪೀಠ ಪ್ರಶ್ನಿಸ್ತು. ಪರಿಸ್ಥಿತಿ ಸದ್ಯ ಸಮಸ್ಯಾತ್ಮಕವಾಗಿದೆ. ಪರಿಸ್ಥಿತಿ ತಿಳಿಯಾದ ಮೇಲೆ ಅರ್ಜಿದಾರರ ಮನವಿ ಪರಿಗಣಿಸುತ್ತೇವೆ. ಹಲವು ಸಂಘಟನೆಗಳು ಅನುಮತಿ ಕೋರಿವೆ. ಇದು ಸಮಸ್ಯೆಯಾಗಿದೆ ಎಂದು ಎಜಿ ಹೇಳಿದರು.
ಆರ್‌ಎಸ್‌ಎಸ್ ಪಥ ಸಂಚಲನದ ಬಗ್ಗೆ ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ನಾವು ಯಾವುದೇ ಕಾರಣಕ್ಕೂ ಯಾವುದೇ ಅರ್ಜಿಗಳನ್ನ ತಿರಸ್ಕರಿಸಿಲ್ಲ. ಬಹಳಷ್ಟು ಸಂಘಟನೆಗಳು ನವೆಂಬರ್ 2 ರಂದೇ ಪಥ ಸಂಚಲನಕ್ಕೆ ಮತ್ತು ಪ್ರತಿಭಟನೆಗೆ ಅರ್ಜಿ ಸಲ್ಲಿಸಿವೆ. ಎಲ್ಲ ಸಂಘಟನೆಗಳನ್ನ ಕರೆದು ಜಿಲ್ಲಾಡಳಿತ ಶಾಂತಿಸಭೆ ನಡೆಸಿದೆ. ರಾಜ್ಯದಲ್ಲಿ ಎಲ್ಲಿಯೂ ಸಮಸ್ಯೆ ಆಗಿಲ್ಲ, ಆದರೆ ಕಲಬುರಗಿಯಲ್ಲಿ ಸಮಸ್ಯೆ ಆಗಿದೆ. ಬಂದೋಬಸ್ತ್‌ಗಾಗಿ ಎರಡು ವಾರಗಳ ಕಾಲ ಸಮಯಾವಕಾಶ ನೀಡಬೇಕೆಂದು ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿಕೊಂಡರು. ಯಾವಾಗ ಅನುಮತಿ ಮಾಡಿಕೊಡುತ್ತೀರಿ? ಎಂದು ಪೀಠ ಪ್ರಶ್ನೆ ಮಾಡಿತು. ಹತ್ತು ದಿನ ಅಥವಾ ಎರಡು ವಾರದ ನಂತರ ಅರ್ಜಿ ವಿಚಾರಣೆ ನಡೆಸಿ. ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಎಜಿ ಹೇಳಿದ್ರು. ಎಲ್ಲರಿಗೂ ಸರ್ಕಾರ ಅನುಕೂಲ ಮಾಡಿಕೊಡಬೇಕು. ಎಲ್ಲರಿಗೂ ಗೆಲುವು ಧಕ್ಕುವಂತಾಗಬೇಕು ಎಂದು ಪೀಠ ಹೇಳಿತು.
