Home Uncategorized ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ ‘ಭಾರತ್ ಟ್ಯಾಕ್ಸಿ’ಯನ್ನು ಪ್ರಾರಂಭಿಸಿದ ಕೇಂದ್ರ ಸರ್ಕಾರ

ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ ‘ಭಾರತ್ ಟ್ಯಾಕ್ಸಿ’ಯನ್ನು ಪ್ರಾರಂಭಿಸಿದ ಕೇಂದ್ರ ಸರ್ಕಾರ

ನವದೆಹಲಿ : ಓಲಾ (Ola) ಮತ್ತು ಉಬರ್‌ನಂತಹ (Uber) ಖಾಸಗಿ ಕಂಪನಿಗಳಿಗೆ ನೇರವಾಗಿ ಸವಾಲು ಹಾಕಲೆಂದೇ ವಿನ್ಯಾಸಗೊಳಿಸಲಾದ ಭಾರತದ (India) ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ ‘ಭಾರತ್ ಟ್ಯಾಕ್ಸಿ’ಯನ್ನು (Bharat Taxi) ಕೇಂದ್ರ ಸರ್ಕಾರ (Central Govt) ಪ್ರಾರಂಭಿಸಿದೆ.ಕೇಂದ್ರದ ಸಹಕಾರ ಸಚಿವಾಲಯ ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಭಾರತ್ ಟ್ಯಾಕ್ಸಿ, ಪ್ರಯಾಣಿಕರಿಗೆ ಸರ್ಕಾರಿದ ಭದ್ರತೆ ಜೊತೆಗೆ ಚಾಲಕರಿಗೆ ತಮ್ಮ ಗಳಿಕೆಯ ಸಂಪೂರ್ಣ ಹಣವನ್ನು ನೀಡುವ ಗುರಿಯನ್ನು ಹೊಂದಿದೆ.

ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳ ಬಗ್ಗೆ ದೂರುಗಳು, ಸೂಕ್ತ ಸೌಲಭ್ಯ ಇಲ್ಲದ ವಾಹನಗಳು ಮತ್ತು ಸಿಕ್ಕಾಪಟ್ಟೆ ದರಗಳು, ಮನಸ್ಸಿಗೆ ಬಂದಾಗ ರೇಡ್ ರದ್ದು ಮಾಡುವುದು, ಬೆಲೆಯಲ್ಲಿ ಏಕಾಏಕಿ ಏರಿಕೆ ಮಾಡುವುದರಿಂದ ಜನರು ಕಂಗೆಟ್ಟಿದ್ದಾರೆ. ಕಂಪನಿಗಳು ವಿಧಿಸುವ ಹೆಚ್ಚಿನ ಕಮಿಷನ್ ದರಗಳ ಬಗ್ಗೆ ಅನೇಕ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಾಗ ತಮ್ಮ ಆದಾಯದ ಶೇಕಡಾ 25 ರವರೆಗೆ ಕಳೆದುಕೊಳ್ಳುತ್ತಿದ್ದೇವೆ ಎಂದು ಆರೋಪ ಮಾಡ್ತಾರೆ.ಈಗ ಬರುತ್ತಿರೋ ಭಾರತ್ ಟ್ಯಾಕ್ಸಿ ಎಲ್ಲಾ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಿದೆ. ಖಾಸಗಿ ಕಂಪನಿಗಳಿಗಿಂತ ಇದು ಭಿನ್ನವಾಗಿರಲಿದೆ. ಭಾರತ್ ಟ್ಯಾಕ್ಸಿ ಚಾಲಕರು ಯಾವುದೇ ಕಮಿಷನ್ ಕೊಡಬೇಕಾಗಿಲ್ಲ. ಅದರ ಬದಲಾಗಿ, ಸದಸ್ಯತ್ವ ಪಡೆಯಬೇಕು. ದೈನಂದಿನ, ವಾರದ ಅಥವಾ ತಿಂಗಳ ಶುಲ್ಕವನ್ನು ಮಾತ್ರ ಪಾವತಿಸಬೇಕು. ಆ ಹಣ ಆಪ್ ಮೇಂಟೇನೆನ್ಸ್​ಗೆ ಬಳಕೆಯಾಗುತ್ತದೆ. ಇದರಿಂದ ಚಾಲಕರು ಹೆಚ್ಚಿನ ಹಣ ಗಳಿಸಲು ಸಹಾಯ ಮಾಡುತ್ತದೆ ಎಂದು ಮೋದಿ ಸರ್ಕಾರ ಹೇಳ್ತಿದೆ. ಭಾರತ್ ಟ್ಯಾಕ್ಸಿಯು ಸದ್ಯ ಬೀಟಾ ಹಂತದಲ್ಲಿದೆ. ನವೆಂಬರ್‌ನಲ್ಲಿ ಈ ಆಪ್ ದೆಹಲಿಯಲ್ಲಿ ಪ್ರಾರಂಭವಾಗಲಿದ್ದು, 650 ವಾಹನಗಳು ಮತ್ತು ಅವುಗಳ ಮಾಲೀಕರು ಚಾಲಕರೊಂದಿಗೆ ಆರಂಭವಾಗಲಿದೆ. ಅಲ್ಲಿ ಯಶಸ್ವಿಯಾದರೆ, ಡಿಸೆಂಬರ್‌ನಲ್ಲಿ ಪೂರ್ಣ ಪ್ರಮಾಣದ ಆಪ್ ಬಿಡುಗಡೆಗೆ ನಿರ್ಧರಿಸಲಾಗಿದೆ. ಆಗ ಈ ಸೇವೆಯು ಬೇರೆ ಬೇರೆ ಪ್ರಮುಖ ನಗರಗಳಿಗೆ ವಿಸ್ತರಿಸಲಿದೆ.

ಒಂದು ವೇಳೆ ಈ ಆಪ್ ಲಾಂಚ್ ಆದರೆ, ಪುರುಷರು ಮತ್ತು ಮಹಿಳೆಯರು ಸೇರಿದಂತೆ 5,000 ಕ್ಕೂ ಹೆಚ್ಚು ಚಾಲಕರು ಆಪ್​ಗೆ ಸೇರಲಿದ್ದಾರೆ. ಮುಂದಿನ ವರ್ಷದಲ್ಲಿ ಈ ಸೇವೆಯು ಬೆಂಗಳೂರು, ಮುಂಬೈ, ಪುಣೆ, ಭೋಪಾಲ್, ಲಕ್ನೋ ಮತ್ತು ಜೈಪುರ ಸೇರಿದಂತೆ 20 ನಗರಗಳಿಗೆ ಹಂತ ಹಂತವಾಗಿ ವಿಸ್ತರಿಸಲಿದೆ. ಮಾರ್ಚ್ 2026 ರ ವೇಳೆಗೆ, ಮೋದಿ ಸರ್ಕಾರವು ಹಲವಾರು ಮೆಟ್ರೋ ನಗರಗಳಲ್ಲಿ ಭಾರತ್ ಟ್ಯಾಕ್ಸಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. 2030 ರ ವೇಳೆಗೆ, ಭಾರತ್ ಟ್ಯಾಕ್ಸಿಯು ಜಿಲ್ಲಾ ಕೇಂದ್ರಗಳು ಮತ್ತು ಗ್ರಾಮೀಣ ಭಾಗಗಳನ್ನು ಸೇರಿ 1 ಲಕ್ಷ ಚಾಲಕರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

You cannot copy content of this page

Exit mobile version