ಗ್ವಾಲಿಯರ್ : ITM ವಿಶ್ವವಿದ್ಯಾನಿಲಯ ಗ್ವಾಲಿಯರ್ 6ನೇ ಬಾದ್‌ಶಾ ಖಾನ್ ಸ್ಮಾರಕ ಪ್ರಶಸ್ತಿಯನ್ನು ಅಕ್ಟೋಬರ್ 15, 2022 ರಂದು ಉಸ್ತಾದ್ ಅಲ್ಲಾವುದ್ದೀನ್ ಖಾನ್ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರಾಂತಿಕಾರಿ ಖಾನ್ ಅಬ್ದುಲ್ ಗಫರ್ ಖಾನ್ ಮತ್ತು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ITM ವಿಶ್ವವಿದ್ಯಾನಿಲಯ ಗ್ವಾಲಿಯರ್ 6ನೇ ಬಾದ್‌ಶಾ ಖಾನ್ ಸ್ಮಾರಕ ಪ್ರಶಸ್ತಿಯನ್ನು ಅಕ್ಟೋಬರ್ 15, 2022 ರಂದು ಮಧ್ಯಾಹ್ನ 3:00 ರಿಂದ ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಪ್ರದಾನ ಸಂಸ್ಥಾಪಕರು ಮತ್ತು ಅಧ್ಯಕರೂ ಆದಂತಹ ಶ್ರೀ ಎಸ್.ಆರ್.ಹಿರೇಮಠರವರು ತಿಳಿಸಿದ್ದಾರೆ. ಈ ಕಾರ್ಯಕ್ರಮವು ಉಸ್ತಾದ್ ಅಲ್ಲಾವುದ್ದೀನ್ ಖಾನ್ ಆಡಿಟೋರಿಯಂ, ಎಲ್ ಡಿವಿ ಬ್ಲಾಕ್, ತುರಾರಿ ಕ್ಯಾಂಪಸ್‌ನಲ್ಲಿ ನಡೆಲಿದ್ದು ಆಯೋಜಕರು ಸಾರ್ವಜನಿಕವಾಗಿ ಎಲ್ಲರಿಗೂ ಆಹ್ವಾನವನ್ನು ನೀಡಿದ್ದಾರೆ.
ITM ವಿಶ್ವವಿದ್ಯಾನಿಲಯ ಗ್ವಾಲಿಯರ್ 5ನೇ ಬಾದ್‌ಶಾ ಖಾನ್ ಸ್ಮಾರಕ ಪ್ರಶಸ್ತಿ ಕಾರ್ಯಕ್ರಮವು 16 ನವೆಂಬರ್ 2021 ರಂದು ನಡೆಸಲಾಗಿತ್ತು. ಗಾಂಧಿವಾದಿ ಅಲ್ಲದೇ ಸ್ವಾತಂತ್ತ್ಯ ಹೋರಾಟಗಾರರೂ ಆದ ಡಾ.ಜಿ.ಜಿ.ಪರೀಖ್ ಅವರಿಗೆ 5ನೇ ಬಾದ್‌ಶಾ ಖಾನ್ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.