ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣ ನಿರ್ಧಾರ ಕೈಬಿಡಲಿ
ಕೆಲಸ ಸ್ಥಗಿತಗೊಳಿಸಿ ಅಧಿಕಾರಿಗಳ ಪ್ರತಿಭಟನೆ
ಹಾಸನ : ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣದ ಉದ್ದೇಶ ಕೈಬಿಡಬೇಕು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಗ್ರಾಮೀಣ ಬ್ಯಾಂಕು ನೌಕರರು ಒಂದು ದಿನದ ಕೆಲಸವನ್ನು ಸ್ಥಗಿತಗೊಳಿಸಿ ನಗರದ ಕೆ.ಆರ್. ಪುರಂ, ಎಂ.ಜಿ. ರೋಡ್ ಹತ್ತಿರ ಇರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ಪ್ರತಿಭಟಿಸಿದರು.ಇದೆ ವೇಳೆ ಅಧಿಕಾರಿ ಸಂಘದ ಅಧ್ಯಕ್ಷ ಪ್ರಭು ಮಾತನಾಡಿ, ಗ್ರಾಮೀಣ ಬ್ಯಾಂಕ್ ನೌಕರರ ನಿರ್ದಿಷ್ಟ ಬೇಡಿಕೆಗಳೆಂದರೇ ಐಪಿಓ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಗ್ರಾಮೀಣ ಬ್ಯಾಂಕುಗಳ ಖಾಸಗಿಕರಣವನ್ನು ನಾವು ವಿರೋಧಿಸುತ್ತೇವೆ. ಪ್ರಾಯೋಜಕ ಬ್ಯಾಂಕ್‌ಗಳಿಂದ ಬೇರ್ಪಡಿಸಬೇಕು ಮತ್ತು ರಾಷ್ಟ್ರೀಯ ರಾಷ್ಟ್ರೀಯ ಗ್ರಾಮೀಣ ಬ್ಯಾಂಕನ್ನು ಸ್ಥಾಪಿಸಿ ಅದರ ಮಾರ್ಗದರ್ಶನದಲ್ಲಿ ಎಲ್ಲಾ 28 ರಾಜ್ಯ ಮಟ್ಟದ ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 50000 ಕೂ ಹೆಚ್ಚು ಹುದ್ದೆಗಳನ್ನು ತಕ್ಷಣವೇ ನೇಮಕಾತಿ ಮಾಡಬೇಕು ಎಂದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವಂತೆ ಸಮನಾಗಿ ಬಡ್ತಿ ನೀತಿಯನ್ನು ಜಾರಿಗೊಳಿಸಬೇಕು.ಅಗತ್ಯತೆಗೆ ತಕ್ಕಂತೆ ಮಾನವಶಕ್ತಿ ನೀತಿ ಮತ್ತು ವರ್ಗಾವಣೆ ನೀತಿಯನ್ನು ರೂಪಿಸಬೇಕು. ಕ್ಯಾಶುವಲ್, ಅರೆಕಾಲಿಕ, ಹೊರಗುತ್ತಿಗೆ, ದೈನಂದಿನ ಕೂಲಿ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ಹೊಸ ಪಿಂಚಣಿ ರದ್ದು ಮಾಡಿ ಹಳೆ ಪಿಂಚಣಿ ಜಾರಿಗೊಳಿಸಬೇಕೆಂದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಚಂದ್ರಶೇಖರ್, ರವಿಶಂಕರ್, ತೇಜಸ್ವಿ, ಯೋಗೀಶ್, ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.