ಬೆಂಗಳೂರು: ರಾಜ್ಯದಲ್ಲಿನ ಪೇ ಸಿ ಎಂ ಅಭಿಯಾನವು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವೇ ಸೃಷ್ಠಿ ಆಗಿದೆ. ಈ ಕುರಿತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಟ್ವೀಟ್ ನಲ್ಲಿ ಅವರು ಕಾಂಗ್ರೆಸ್ ಮುಖ್ಯಮಂತ್ರಿಗಳು, ನಾಯಕರ ತೇಜೋವಧೆ ಮಾಡುವಾಗ ಬಿಜೆಪಿಗೆ ರಾಜ್ಯದ ಘನತೆ, ಅವರ ಸ್ಥಾನದ ಗೌರವದ ನೆನಪಿರಲಿಲ್ಲವೇ? ಗುಬ್ಬಿ ಮೇಲೆ ಭ್ರಹ್ಮಾಸ್ತ್ರಾ ಎಂಬಂತೆ ಕಾರ್ಯಕರ್ತರ ಮೇಲೆ ನಿಮ್ಮ ಪೌರುಷ ತೋರಿಸುವುದು ಎಷ್ಟು ಸರಿ? ಒಂದು ಕ್ಯೂಆರ್ ಕೋಡ್‌ಗೆ ಸರ್ಕಾರ ಅಲ್ಲಾಡುತ್ತಿದೆ. ಇಷ್ಟೇನಾ ನಿಮ್ಮ ಧಮ್ಮು-ತಾಕತ್ತು-ಧೈರ್ಯ? ಎಂದು ವಿಮರ್ಶೆ ಮಾಡಿದ್ದಾರೆ.
ಇದನ್ನೂ ನೋಡಿ: https://www.youtube.com/watch?v=v5P_-Jpo4cY