ಆನ್‌ಲೈನ್ ಬೆಟ್ಟಿಂಗ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಆನ್‌ಲೈನ್ ಬೆಟ್ಟಿಂಗ್ ಅನ್ನು ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ಸರ್ಕಾರ ತರಲು ಮುಂದಾಗಿದೆ.
ಆನ್‌ಲೈನ್ ಗೇಮಿಂಗ್ ವೇದಿಕೆಗಳ ಮೂಲಕ ನಡೆಯುವ ವಂಚನೆಗಳನ್ನು ನಿಯಂತ್ರಿಸುವುದು ಮತ್ತು ಕಾನೂನುಬಾಹಿರ ಬೆಟ್ಟಿಂಗ್ ಚಟುವಟಿಕೆಗಳನ್ನು ತಡೆಯುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಬೆಟ್ಟಿಂಗ್ ಅಥವಾ ಜೂಜು ನಡೆಯುವ ಆನ್‌ಲೈನ್ ಗೇಮ್ಸ್ ಆಯೋಜಕರ ಮೇಲೆ ಭಾರಿ ದಂಡ ವಿಧಿಸುವುದು, ಶಿಕ್ಷಿಸುವುದು ಮತ್ತು ಅಗತ್ಯವಿದ್ದರೆ ನಿಷೇಧಿಸುವುದು ಮುಂತಾದ ಅಂಶಗಳನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಮಂಗಳವಾರ ಕೇಂದ್ರ ಸಂಪುಟವು ಅನುಮೋದಿಸಿದ ಈ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಮಸೂದೆಯ ಮೂಲಕ ಮನರಂಜನೆ ಆಧಾರಿತ ಆನ್‌ಲೈನ್ ಗೇಮ್‌ಗಳು ಮತ್ತು ಹಣದ ವ್ಯವಹಾರದೊಂದಿಗೆ ಸಂಬಂಧಿಸಿದ ಇತರ ಗೇಮ್‌ಗಳ ನಡುವೆ ಸ್ಪಷ್ಟವಾದ ಗಡಿರೇಖೆ ಹಾಕಲು ಸರ್ಕಾರ ಬಯಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಆನ್‌ಲೈನ್‌ನಲ್ಲಿರುವ ಇತರ ಗೇಮ್‌ಗಳನ್ನು ಹಾಗೆಯೇ ಮುಂದುವರಿಸಲು ಅವಕಾಶ ನೀಡಲಾಗಿದೆ.