Wednesday, February 11, 2026

ಸತ್ಯ | ನ್ಯಾಯ |ಧರ್ಮ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ JDS -BJP ಮೈತ್ರಿಗೆ ಬಾರಿ ವಿರೋಧ

ಹಾಸನ : ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಯಿಂದ ಟಿಕೆಟ್ ವಂಚಿತರಾಗುವ ಭಯದಿಂದ ಮಾಜಿ ಶಾಸಕ ಪ್ರೀತಂಗೌಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಲಿಂಗೇಶ್ ಹೇಳಿದರು.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಇದ್ದಾಗ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದರು. ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ. ಮೈತ್ರಿಯಿಂದ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ” ಎಂದು ಕಿಡಿಕಾರಿದರು.
“ಹಾಸನದಲ್ಲಿ ಬಿಜೆಪಿ ಹೈಕಮಾಂಡ್ ಪ್ರೀತಂಗೌಡರೇನಾ? ನಿಮಗೆ ಯಾವುದೇ ನಿಯಂತ್ರಣ ಇಲ್ಲವೇ?” ಎಂದು ಪ್ರಶ್ನಿಸಿದರು. ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಮಂಡ್ಯ ಜಿಲ್ಲೆಗೆ ₹500 ಕೋಟಿ ವೆಚ್ಚದಲ್ಲಿ ಸಂಶೋಧನಾ ಸಂಸ್ಥೆಯನ್ನು ಸ್ವಾಗತಿಸಿದ ಲಿಂಗೇಶ್, “ಇದರ ಲಾಭ ಹಾಸನಕ್ಕೂ ಆಗಲಿದೆ. ಜಿಲ್ಲೆಯಲ್ಲೂ ಬೃಹತ್ ಕೈಗಾರಿಕೆ ತರಲು ಮನವಿ ಮಾಡಿದ್ದೇವೆ.

ಜಿಲ್ಲೆಯ ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯರಾಗದೇ, ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಸೂಚನೆ.

ಶಿವಲಿಂಗೇಗೌಡರ ವರ್ತನೆಗೆ ಖಂಡನೆ

ಶಾಸಕ ಶಿವಲಿಂಗೇಗೌಡ ಅವರು ವಿಧಾನಸೌಧದಲ್ಲಿ ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲಿಂಗೇಶ್, “ಸದನದ ಗೌರವ ಕಾಪಾಡಬೇಕು. ಶಾಸಕ ಶರಣ ಸಲಗರ ಅವರ ಪತ್ನಿ ಕುರಿತು ಸದನದಲ್ಲಿ ಮಾತನಾಡಿರುವುದು ಖಂಡನೀಯ” ಎಂದು ಹೇಳಿದರು.

ಅರಸೀಕೆರೆ ಕ್ಷೇತ್ರದಲ್ಲಿ ದೇವೇಗೌಡರ ವರ್ಚಸ್ಸು ಇಲ್ಲ ಎಂಬ ಶಿವಲಿಂಗೇಗೌಡರ ಆರೋಪಕ್ಕೂ ಕೇಳಿದ ಅವರು, “ಶಿವಲಿಂಗೇಗೌಡರು ಶಾಸಕರಾಗುವುದಕ್ಕೂ ಮೊದಲು ಜೆಡಿಎಸ್ ನಿಂದ ಗೆದ್ದಿದ್ದಾರೆ. ಸಿದ್ಧಾಂತವಿಲ್ಲದೆ ಮಂತ್ರಿಗಿರಿಯ ಆಸೆಗಾಗಿ ಕಾಂಗ್ರೆಸ್ ಸೇರಿದ್ದಾರೆಎಂದು ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page