Friday, August 1, 2025

ಸತ್ಯ | ನ್ಯಾಯ |ಧರ್ಮ

ಸದನದಲ್ಲಿ ಪ್ರತಿಪಕ್ಷಗಳ ಧ್ವನಿ ಭಾರತದ ಧ್ವನಿಯಾಗಿರುತ್ತದೆ: ರಾಹುಲ್‌ ಗಾಂಧಿ

ನವದೆಹಲಿ: ಪ್ರತಿಪಕ್ಷಗಳು ಸದನದಲ್ಲಿ ಭಾರತದ ಪ್ರತಿಧ್ವನಿಯಾಗಿರುತ್ತವೆ. ಸದನದ ಸ್ಪೀಕರ್‌ ಆದವರು ಯಾವತ್ತು ಕೂಡ ಪ್ರತಿಪಕ್ಷಗಳಿಗೆ ಮಾತನಾಡಲು ಹೆಚ್ಚು ಅವಕಾಶ ಕೊಡಬೇಕು. ಭಾರತದ ಸಂವಿಧಾನವನ್ನು ರಕ್ಷಿಸುವ ಕರ್ತವ್ಯವನ್ನು ನಿರ್ವಹಿಸಬೇಕು” ಎಂದು ರಾಹುಲ್‌ ಗಾಂಧಿ ಹೇಳಿದರು.

18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಅಭಿನಂದಿಸುವ ಸಂದರ್ಭಧಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಾವು ಪ್ರತಿಕ್ಷಗಳ ಧ್ವನಿಯನ್ನು ಹತ್ತಿಕ್ಕಿವುದಿಲ್ಲ ಎಂಬ ನಿರೀಕ್ಷೆಯಿದೆ” ಎಂದಿದ್ದಾರೆ.

ನೀವು ನಿಮ್ಮ ಕೆಲಸವನ್ನು ಸಮರ್ಥವಾಗಿ ಮುಂದುವರಿಸಬೇಕು ಮತ್ತು ಸದನ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಪ್ರತಿಪಕ್ಷಗಳ ಮುಖಂಡರಾದ ನಾವು ಬಯಸುತ್ತೇವೆ. ಸಹಕಾರ, ನಂಬಿಕೆಯ ಆಧಾರದ ಮೇಲೆ ಸದನ ನಡೆಯುವುದು ಬಹಳ ಮುಖ್ಯ” ಎಂದು ರಾಹುಲ್ ಹೇಳಿದರು.

“ಸದನವು ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ನೀವು ಆ ಧ್ವನಿಯ ಅಂತಿಮ ತೀರ್ಪುಗಾರರು. ಸದನ ಎಷ್ಟು ಸಮರ್ಥವಾಗಿ ನಡೆಯುತ್ತದೆ ಎಂಬುವುದು ಪ್ರಶ್ನೆಯಲ್ಲ. ಈ ಸದನದಲ್ಲಿ ಭಾರತದ ಧ್ವನಿಯನ್ನು ಕೇಳಲು ಎಷ್ಟು ಅನುಮತಿಸಲಾಗಿದೆ ಎಂಬುವುದು ಬಹಳ ಮುಖ್ಯ” ಎಂದು ಅವರು ಒತ್ತಿ ಹೇಳಿದರು.

ರಾಹುಲ್ ಗಾಂಧಿಯ ಬಳಿಕ ಸದನವನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ “ವಿರೋಧ ಪಕ್ಷದ ಧ್ವನಿಯನ್ನು ನೀವು ಹತ್ತಿಕ್ಕುವುದಿಲ್ಲ, ಇನ್ನು ಮುಂದೆ ಯಾವುದೇ ಉಚ್ಚಾಟನೆಗಳು ಇರುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ” ಎಂದರು.

“ನೀವು ಸ್ಪೀಕರ್ ಆಗಿ ತಾರತಮ್ಯ ಮಾಡುವುದಿಲ್ಲ. ಪ್ರತಿ ಪಕ್ಷಕ್ಕೂ ಸಮಾನ ಅವಕಾಶ ಮತ್ತು ಗೌರವವನ್ನು ನೀಡುತ್ತೀರಿ ಎಂದು ನಾವು ನಂಬುತ್ತೇವೆ. ನಿಷ್ಪಕ್ಷಪಾತವು ಈ ದೊಡ್ಡ ಹುದ್ದೆಯ ದೊಡ್ಡ ಜವಾಬ್ದಾರಿಯಾಗಿದೆ. ಇಲ್ಲಿ ಕುಳಿತಿರುವ ನೀವು ಪ್ರಜಾಪ್ರಭುತ್ವದ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು” ಎಂದು ಅಖಿಲೇಶ್ ಹೇಳಿದರು.

ಲೋಕ ಸಭೆಯ ಸ್ಪೀಕರ್ ಆಗಿ ಬಿಜೆಪಿ ಅಭ್ಯರ್ಥಿ ಓಂ ಬಿರ್ಲಾ ಬುಧವಾರ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಸಂಖ್ಯಾಬಲ ಆಡಳಿತರೂಢ ಸಮ್ಮಿಶ್ರ ಸರ್ಕಾರದ ಪರವಾಗಿ ಇರುವುದರಿಂದ ಎನ್‌ಡಿಎ ಅಭ್ಯರ್ಥಿ ಸ್ಪೀಕರ್ ಸ್ಥಾನವನ್ನು ಉಳಿಸಿಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page