Tuesday, February 10, 2026

ಸತ್ಯ | ನ್ಯಾಯ |ಧರ್ಮ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ನಿಷೇಧಾಜ್ಞೆ ಜಾರಿ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕು ಬೆಂಗಳೂರು-ಮಂಗಳೂರು NH 75ರ 222+900ರಲ್ಲಿ ಮಂಜ್ರಾಬಾದ್ ಕೋಟೆಯ ಸಮೀಪ ದೋಣಿಗಲ್ ಪ್ರದೇಶದ ರಸ್ತೆ ಕಾಮಗಾರಿ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದು ಪಕ್ಕದ ಭೂಮಾಲಿಕರು ಕಾಮಗಾರಿಯನ್ನು ತಡೆದು ನಿಲ್ಲಿಸಲಾಗಿದೆ.

ಈ ಹಾಸನ ಬೈ ಪಾಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ-75ರ ದೋಣಿಗಲ್ ವಿಭಾಗ ಕಾಮಗಾರಿಗಳನ್ನು ತ್ವರಿತವಾಗಿ ನಡೆಸುತ್ತಿದೆ ಪೂರ್ಣಗೊಳಿಸಬೇಕಾಗಿರುವುದು ಫೆಬ್ರವರಿ 7 ರಿಂದ ಮಾರ್ಚ್ ವರೆಗೆ ಬೆಂಗಳೂರು-ಮಂಗಳೂರು NH-75ರ 222+900 ರಿಂದ 223+700 ದೋಣಿಗಾಲ್ ರಸ್ತೆಯಿಂದ ಕೆಸಗನಹಳ್ಳಿ ರಸ್ತೆ ಕಾಮಗಾರಿ ನಡೆಯಲಿದ್ದು ಸದರಿ ಕಾಮಗಾರಿ ನೆಡದಿದ್ದು, 100 ಮೀಟರ್ ಕಾಮಗಾರಿಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ. ನಿಷೇಧಿತ ಪ್ರದೇಶವು 5 ಜನರಿಗಿಂತ ಹೆಚ್ಚು ಗುಂಪಾಗಿ ನಿಲ್ಲುವುದಿಲ್ಲ, ಈ ಅವಧಿಯಲ್ಲಿ ಆಯುಧ ಮತ್ತು ಮಾರಕಾಸ್ತ್ರಗಳನ್ನು ಹಿಡಿದುಕೊಳ್ಳಿ ಯಾವುದೇ ರೀತಿಯ ಪ್ರಚಾರ ಸಾಮಾಗ್ರಿಗಳನ್ನು ಹಿಡಿದುಕೊಂಡು ಘೋಷಣೆ ಕೂಗಿ ಪ್ರಚಾರ ಮಾಡಲು ಅವಕಾಶವಿಲ್ಲ. ಈ ಆದೇಶವು ಕಾಮಗಾರಿ ನಡೆಸುವ ಅಧಿಕಾರಿಗಳು/ಸಿಬ್ಬಂದಿಗಳು ಯಾವುದೇ ನಿಷೇಧಿತ ಪ್ರದೇಶದೊಳಗೆ ಪ್ರವೇಶಿಸಬಹುದಾಗಿದೆ ಮೇಲ್ಕಂಡ ನಿಬಂಧನೆಗಳನ್ನು ಉಲಂಘಿಸಿದಲ್ಲಿ ಸಂಭಂದಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಅವರು ಆದೇಶದಲ್ಲಿ ಪ್ರಕಟಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page