Home ಬೆಂಗಳೂರು ಬಡವರೆಲ್ಲರೂ ನಮ್ಮೋರು ಎಲ್ಲರಿಗೂ ವಸತಿ ಕಲ್ಪಿಸುವುದೇ ನಮ್ಮ ಸಂಕಲ್ಪ: ಕೃಷ್ಣ ಬೈರೇಗೌಡ

ಬಡವರೆಲ್ಲರೂ ನಮ್ಮೋರು ಎಲ್ಲರಿಗೂ ವಸತಿ ಕಲ್ಪಿಸುವುದೇ ನಮ್ಮ ಸಂಕಲ್ಪ: ಕೃಷ್ಣ ಬೈರೇಗೌಡ

0
  • ಅರ್ಹ ಫಲಾನುಭವಿಗಳಿಗೆ 248 ಮನೆ ವಿತರಣೆ
  • ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಲಾದ ಮನೆಗಳು
  • ಬ್ಯಾಟರಾಯನಪುರ ಕ್ಷೇತ್ರದ ಸಿಂಗಾಪರದಲ್ಲಿ ವಿತರಣೆ
  • ಬಡವರಿಗೆ ಸೂರು ಕಲ್ಪಿಸುವ ಯೋಜನೆ

ಬೆಂಗಳೂರು, ನವೆಂಬರ್ 09: ಬಡವರೆಲ್ಲರೂ ನಮ್ಮೋರು ಎಲ್ಲರಿಗೂ ವಸತಿ ಕಲ್ಪಿಸುವುದೇ ನಮ್ಮ ಸಂಕಲ್ಪ. ನಮ್ಮ ಸರ್ಕಾರವೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇಂದು ವಸತಿ ರಹಿತರಿಗೆ ಮನೆ ಹಕ್ಕುಪತ್ರ ನೀಡುತ್ತಿರುವುದು ನನಗೆ ವ್ಯಯಕ್ತಿಕವಾಗಿ ನಿಜಕ್ಕೂ ಸಂತೋಷದ ಕೆಲಸ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಿಂಗಾಪುರದ ಸರ್ವೇ ನಂ-109ರಲ್ಲಿ ಕರ್ನಾಟಕ ಕೋಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನರ್ಮ್-ಬಿಎಸ್‌ಯುಪಿ ಯೋಜನೆಯಡಿ 248 ಮನೆಗಳನ್ನು ನಿರ್ಮಿಸಿ ಅರ್ಹರಿಗೆ-ಬಡವರಿಗೆ ಹಂಚಲಾಯಿತು.

ಇಂದು ಬ್ಯಾಟರಾಯನಪುರ ಜೆಸಿ ಕಚೇರಿಯಲ್ಲಿ ಎಲ್ಲಾ ಫಲಾನುಭವಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಹಕ್ಕು ಪತ್ರಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, “ಮಹಾನಗರಗಳಲ್ಲಿ ಬದುಕುವವರಿಗೆ ಮನೆ ಎಂಬುದು ತುಂಬಾ ಮುಖ್ಯ. ಮನೆ ಇದ್ರೆ ಮನೆಸಿಗೆ ನೆಮ್ಮದಿ ಅಂತಹ ನೆಮ್ಮದಿ ಎಲ್ಲರಿಗೂ ಸಿಗಲಿ ಎಂಬುದೇ ನಮ್ಮ ಆಶಯ. ಆದರೆ, ಬಡವರು ಬೆಂಗಳೂರಿನಂತಹ ನಗರದಲ್ಲಿ ಸ್ವಂತ ಮಾಡಿಕೊಳ್ಳುವುದು ಅಷ್ಟು ಸುಲಭವೇನಲ್ಲ. ಹೀಗಾಗಿ ನಮ್ಮಿಂದ ಸಾಧ್ಯವಾದಷ್ಟು ಜನರಿಗೆ ಹೀಗೆ ಮನೆ ನಿರ್ಮಿಸಿಕೊಡುತ್ತಿರುವುದು ನಿಜಕ್ಕೂ ಸಂತೋಷದ ಕೆಲಸ” ಎಂದರು.

ಮುಂದುವರೆದು, “ಅಸಲಿಗೆ ಕೆಲ ವರ್ಷಗಳ ಹಿಂದೆ ಈ ಜಾಗ ಒತ್ತುವರಿಯಾಗಿತ್ತು. ಆ ಅಕ್ರಮ ಒತ್ತುವರಿದಾರರನ್ನು ಅಲ್ಲಿಂದ ಓಡಿಸಿ ಆ ಜಾಗದ ಸುತ್ತ ಬೇಲಿ ಹಾಕಿ ರಕ್ಷಿಸಲಾಗಿತ್ತು. ನಂತರ ಅಲ್ಲಿ ಡೋಬಿ ಕೆಲಸ ಕೆಲಸಗಾರರಿಗೆ ಅನುಕೂಲವಾಗಲಿ ಎಂದು ಬೋರ್ ವೆಲ್ ಹಾಕಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಶೆಡ್ ಹಾಕಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು.

ಈ ಮೂಲಕ ಭೂಮಿಯ ರಕ್ಷಣೆ ಮಾಡಲಾಗಿತ್ತು. ಇದೀಗ ಅದೇ ಜಾಗದಲ್ಲಿ ಸ್ಲಂ ಬೋರ್ಡ್ ಸಹಾಯದಿಂದ 248 ಮನೆಗಳನ್ನು ನಿರ್ಮಿಸಿ ಬಡವರಿಗೆ, ಅರ್ಹರಿಗೆ ನೀಡಲಾಗುತ್ತಿರುವುದು ನಿಜಕ್ಕೂ ನಮ್ಮ ಕೆಲಸ ಸಾರ್ಥಕ ಎನಿಸುತ್ತಿದೆ” ಎಂದು ಅವರು ಸಂತೋಷ ಹಂಚಿಕೊಂಡರು.

You cannot copy content of this page

Exit mobile version