Home ಬ್ರೇಕಿಂಗ್ ಸುದ್ದಿ ಹಲವು ರಾಜ್ಯಗಳಲ್ಲಿ ಏಕಕಾಲದಲ್ಲಿ PFI ಕಚೇರಿಗಳ ಮೇಲೆ NIA, ED ದಾಳಿ: ಹಲವು ವ್ಯಕ್ತಿಗಳು NIA...

ಹಲವು ರಾಜ್ಯಗಳಲ್ಲಿ ಏಕಕಾಲದಲ್ಲಿ PFI ಕಚೇರಿಗಳ ಮೇಲೆ NIA, ED ದಾಳಿ: ಹಲವು ವ್ಯಕ್ತಿಗಳು NIA ವಶಕ್ಕೆ

0

ಇಂದು ಬೆಳಗಿನ ಜಾವ ಮೂರು ಗಂಟೆಯಿಂದ NIA, CRPF ಮತ್ತು ರಾಜ್ಯ ಪೋಲಿಸರ ಜಂಟು ನೇತೃತ್ವದಲ್ಲಿ PFI ಸಂಘಟನೆಯ ಕಚೇರಿಗಳ ಮೇಲೆ ಹಲವು ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆಸಲಾಗಿದೆ.

ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸಂಘಟನೆಯ ಕಾರ್ಯಕರ್ತರು ತೀವ್ರ ಪ್ರತಿರೋಧವನ್ನು ಒಡ್ಡುತ್ತಿದ್ದು, ಹಲವೆಡೆ ನಾಯಕರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಇದು ಇದುವರೆಗಿನ ಅತಿದೊಡ್ಡ ದಾಳಿ ಎನ್ನಲಾಗುತ್ತಿದ್ದು 13 ರಾಜ್ಯಗಳಲ್ಲಿ 100 ಸ್ಥಳಗಲ್ಲಿ ದಾಳಿ ನಡೆಸಲಾಗಿದೆ.

ಭಯೋತ್ಪಾದಕ ಕೃತ್ಯಗಳಿಗೆ ಹಣದ ಹರಿವು, ಭಯೋತ್ಪಾದನಾ ತರಬೇತಿ ನೀಡಿದ ಆರೋಪಗಳಡಿಯಲ್ಲಿ ಈ ದಾಳಿಯನ್ನು ನಡೆಸಲಾಗುತ್ತಿದೆ.

PFI ಕಚೇರಿ ಮತ್ತು ಅದರ ಸಂಘಟನೆಯ ಮುಖ್ಯಸ್ಥರುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಇದೇ ದಾಳಿಯ ಭಾಗವಾಗಿ ಕರ್ನಾಟಕದ ಬಂಟ್ವಾಳ, ವಿಟ್ಲ, ಮಂಗಳೂರುಗಳಲ್ಲಿಯೂ ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಹಾರ್ಡ್‌ಡ್ರೈವ್‌ ಮತ್ತು ಪೆನ್‌ಡ್ರೈವ್‌ಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ.

You cannot copy content of this page

Exit mobile version