Tuesday, June 25, 2024

ಸತ್ಯ | ನ್ಯಾಯ |ಧರ್ಮ

ಹಿರಿಯ ವ್ಯಂಗ್ಯಚಿತ್ರ ಕಲಾವಿದ ಪಂಜು ಗಂಗೊಳ್ಳಿಯವರಿಗೆ ಜಿವಿ ಭಾಷಾ ಸಮ್ಮಾನ್ ಪ್ರಶಸ್ತಿ

ಬೆಂಗಳೂರು: ಹಿರಿಯ ವ್ಯಂಗ್ಯಚಿತ್ರ ಕಲಾವಿದ – ಸಾಹಿತಿ ಪಂಜು ಗಂಗೊಳ್ಳಿಯವರಿಗೆ ಕಥೆಕೂಟ ಸಂಸ್ಥೆಯು ನೀಡುವ ಜಿ ವಿ ವೆಂಕಟಸುಬ್ಬಯ್ಯ ಸ್ಮರಣಾರ್ಥ ಜಿವಿ ಭಾಷಾ ಸಮ್ಮಾನ್ ಪ್ರಶಸ್ತಿ ದೊರಕಿದೆ.

ಪಂಜು ಗಂಗೊಳ್ಳಿಯವರು ಸಂಪಾದಿಸಿ ʼಕುಂದಾಪುರ ಕನ್ನಡ ನಿಘಂಟುʼ ಪುಸ್ತಕಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಈ ಪುಸ್ತಕಕ್ಕಾಗಿ ಪಂಜು ಗಂಗೊಳ್ಳಿಯವರು ತಮ್ಮ ತಂಡದೊಡನೆ ಎರಡೂ ದಶಕಕ್ಕೂ ಮಿಕ್ಕಿ ಕೆಲಸ ಮಾಡಿದ್ದಾರೆ. ಈ ನಿಘಂಟಿನಲ್ಲಿ 10,000 ಕ್ಕೂ ಮಿಕ್ಕ ಪದಗಳು ಮತ್ತು ಸುಮಾರು 1,700 ನುಡಿಗಟ್ಟುಗಳನ್ನು ಸಂಗ್ರಹಿಸಿ ಅವುಗಳನ್ನು ಅರ್ಥ ಸಮೇತ ವಿವರಿಸಲಾಗಿದೆ.

ಪ್ರಕಾಶಕರಾದ ರಾಜಾರಾಮ್‌ ತಲ್ಲೂರು, ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಸೇರಿದಂತೆ ಹಲವರು ಅವರನ್ನು ಅಭಿನಂದಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಒಂದು ವಿಶ್ವ ವಿದ್ಯಾಲಯ ಮಾಡಬಹುದಾದ ಕೆಲಸವನ್ನು ಒಂದು ಸಣ್ಣ ತಂಡ ಸಾಧಿಸಿರುವುದು ನಿಜಕ್ಕೂ ಅಭಿನಂದನೀಯ ಕೆಲಸವಾಗಿದೆ. ಯೂನಿಫಾರ್ಮಲ್‌ ಭಾಷೆಗೆ ಸ್ಥಳೀಯ ಪದ ಸಂಪತ್ತುಗಳು ನಾಶವಾಗುತ್ತಿರುವ ಈ ಸಮಯದಲ್ಲಿ ಅವುಗಳನ್ನು ಸಂಗ್ರಹಿಸಿಡುವುದು ಬಹಳ ತುರ್ತಿನ ಕೆಲಸವಾಗಿತ್ತು.

ಅದನ್ನು ಮಾಡಬೇಕಿದ್ದ ಸರ್ಕಾರ, ಯೂನಿವರ್ಸಿಟಿಗಳು ಏನೂ ಮಾಡದಿರುವ ಕಾಲದಲ್ಲಿ ಇಂತಹದ್ದೊಂದು ಕೆಲಸಕ್ಕಾಗಿ ಎರಡು ದಶಕಗಳ ಕಾಲ ದುಡಿದ ನಿಘಂಟು ತಜ್ಞರು ಮತ್ತು ಪ್ರಕಟಿಸಿದ ಪ್ರಕಾಶಕರಿಗೆ ಅಭಿನಂದನೆಗಳು.

Related Articles

ಇತ್ತೀಚಿನ ಸುದ್ದಿಗಳು