Home ವಿದೇಶ 2024ರ ಒಲಿಂಪಿಕ್ಸ್‌ಗೆ ಕೆಲವೇ ತಿಂಗಳುಗಳ ಮೊದಲು ಪ್ಯಾರಿಸನ್ನು ಆಕ್ರಮಿಸಿದ ತಿಗಣೆಗಳು

2024ರ ಒಲಿಂಪಿಕ್ಸ್‌ಗೆ ಕೆಲವೇ ತಿಂಗಳುಗಳ ಮೊದಲು ಪ್ಯಾರಿಸನ್ನು ಆಕ್ರಮಿಸಿದ ತಿಗಣೆಗಳು

0

ಪ್ಯಾರಿಸ್, ಅಕ್ಟೋಬರ್ 5 (ANI): ಕಳೆದ ಕೆಲವು ವಾರಗಳಿಂದ ತಿಗಣೆಗಳಿಂದ ಪ್ರಾನ್ಸ್ ತತ್ತರಿಸಿ ಹೋಗಿದೆ. ಪ್ಯಾರಿಸ್ ಮತ್ತು ಮರ್ಸಿಲ್ಲೆಯಲ್ಲಿ ಬೆಡ್‌ಬಗ್‌ಗಳು ಸೃಷ್ಟಿಸುತ್ತಿರುವ ಸಮಸ್ಯೆ ಸ್ಥಳೀಯರಲ್ಲಿ ಭಯವನ್ನು ಉಂಟುಮಾಡಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಈ ವರ್ಷ ಕಾರ್ಯವು ರಾಷ್ಟ್ರವು ತಿಂಗಳ ಪ್ರಾರಂಭವಾಗುವ ಪ್ಯಾರಿಸ್ 2024 ನಗರದಲ್ಲಿ ಪ್ರಾರಂಭವಾದ ಕೇವಲ 10 ಮೊದಲೇ ಫ್ರೆಂಚ್ ರಾಜಧಾನಿಯನ್ನು ಬೆಡ್ ಬ್ಯಾಗ್‌ಗಳು ಆಕ್ರಮಿಸಿಕೊಂಡಿವೆ.

ಬೇಸಿಗೆಕಾಲದಲ್ಲಿ ಹೋಟೆಲ್‌ಗಳು ಮೊದಲಾದ ಕಡೆ ಹರಡಿದ್ದ ಬೆಡ್‌ಬಗ್‌ಗಳ ಬಗ್ಗೆ ವರದಿಯಾಗಿತ್ತು. ಸದ್ಯ ಇವು ಇಡೀ ನಗರದಾದ್ಯಂತ ಹರಡಿವೆ. ಸಿನೆಮಾ ಥಿಯೇಟರ್‌ಗಳಲ್ಲಿ, ಆ ದೇಶದ ಹೈಸ್ಪೀಡ್ ರೈಲುಗಳು ಮತ್ತು ಪ್ಯಾರಿಸ್ ಮೆಟ್ರೋಗಳ ಸೀಟ್‌ಗಳಲ್ಲಿ ಬೆಡ್‌ಬಗ್‌ಗಳು ಕಂಡುಬಂದಿವೆ. ಬಡ್‌ಬಗ್‌ಗಳಿಗೆ ಚಿಕಿತ್ಸೆ ನೀಡುವ ಪ್ಯಾರಿಸ್‌ನ ಕಂಪನಿಗಳು ಇವುಗಳು ಮಿತಿಮೀರಿರುವ ಬಗ್ಗೆ ಕಳವಳ ವ್ಯಕ್ತಪಡಿಸಿವೆ.  

ಬೇಸಿಗೆಯ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಭೇಟಿ ನೀಡುವವರಿಗೆ, ಅದರಲ್ಲೂ ಪ್ಯಾರಿಸ್ ಸಿಟಿ ಹಾಲ್‌ಗೆ ಬರುವವರಿಗೆ ಅಪಾಯ ಸಂಭವಿಸುವ ಸಾಧ್ಯತೆಗಳಿವೆ.

“ಬೆಡ್‌ಬಗ್‌ಗಳನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಘೋಷಿಸಬೇಕು” ಎಂದು ಪ್ಯಾರಿಸ್‌ನ ಉಪ ಮೇಯರ್ ಎಮ್ಯಾನುಯೆಲ್ ಗ್ರೆಗೊಯಿರ್ ಪ್ರಧಾನಿ ಎಲಿಸಬೆತ್ ಬೋರ್ನ್‌ಗೆ ಬರೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಮಸ್ಯೆಯನ್ನು ಪರಿಹರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಅವರು ಸರ್ಕಾರಕ್ಕೆ ಕರೆ ನೀಡಿದ್ದಾರೆ.

ಗಾತ್ರದಲ್ಲಿ ಸಣ್ಣದಾಗಿರುವ ಇವುಗಳನ್ನು ಬರಿಗಣ್ಣುಗಳಿಂದ ನೋಡಬಹುದು. ಇವು ಸುಲಭವಾಗಿ ಹರಡುತ್ತವೆ ಮತ್ತು ಹಾಸಿಗೆಗಳು, ಸೋಫಾ, ಪರದೆಗಳಂತಹ ಇತರ ಮೃದುವಾದ ಪೀಠೋಪಕರಣಗಳಲ್ಲಿ ಅಡಗಿರುತ್ತವೆ. ನೆಲದ ಹಲಗೆಗಳ ನಡುವೆ, ವಿದ್ಯುತ್ ಸಾಕೆಟ್‌ಗಳಲ್ಲಿ ಮತ್ತು ವಾಲ್‌ಪೇಪರ್‌ಗಳಲ್ಲಿ ಕೂಡ ಇರುತ್ತವೆ. ರಾತ್ರಿಯಾಗುತ್ತಿದ್ದಂತೆ ಮನುಷ್ಯರ ರಕ್ತ ಹೀರಲು ಅವು ಹೊರಗೆ ಬರುತ್ತವೆ.

ಪ್ರವಾಸಿಗರು ತಮ್ಮ ಸಾಮಾನು ಸರಂಜಾಮುಗಳ ಮೂಲಕ ಹೊಟೀಲುಗಳಿಂದ  ಪ್ಯಾರಿಸ್‌ನ ಮೆಟ್ರೋ ಅಥವಾ ಇತರ ಸಾರ್ವಜನಿಕ ಸಾರಿಗೆಯ ಮೂಲಕ ನಗರದ ಇತರ ಭಾಗಗಳಿಗೆ ಸಾಗಿಸುವ ಸಾಧ್ಯತೆ ಇದೆ. ಇವು ಆಹಾರ ಮತ್ತು  ಸಂತಾನೋತ್ಪತ್ತಿಗೆ ಸ್ಥಳವನ್ನು ಕಂಡುಕೊಂಡರೆ, ಅಲ್ಲೆಲ್ಲಾ ಇವು ತ್ವರಿತವಾಗಿ ಹರಡುತ್ತವೆ.

ತಿಗಣೆಗಳಿಂದ ಪ್ರಯಾಣಿಕರಿಗೆ ರಕ್ಷಣೆ ನೀಡಲು  ಫ್ರೆಂಚ್ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಅವರು ಹಲವಾರು ಸಾರ್ವಜನಿಕ ಸಾರಿಗೆ ಕಂಪನಿಗಳೊಂದಿಗೆ ಈ ವಾರ ಸಭೆಯನ್ನು ನಿಗದಿಪಡಿಸಿದ್ದಾರೆ.

You cannot copy content of this page

Exit mobile version