Thursday, May 9, 2024

ಸತ್ಯ | ನ್ಯಾಯ |ಧರ್ಮ

ಮುಂದೆ ಕಾದಿದೆ ಭಾರೀ ಆರ್ಥಿಕ ಸಂಕಷ್ಟ | ಒಳ ಉಡುಪು ಖರೀದಿ ನಿಲ್ಲಿಸಿದ ಭಾರತೀಯರು.. ನಷ್ಟದಲ್ಲಿ ಕಂಪನಿಗಳು

ಒಳ ಉಡುಪು: ಹಬ್ಬದ ಸೀಸನ್ ಬಂದಿದೆ. ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಲು ಜನರು ಹೊಸ ಬಟ್ಟೆಗಾಗಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಆದರೆ ಇದರ ನಡುವೆ ಆಘಾತಕಾರಿ ವಿಷಯವೊಂದು ಬೆಳಕಿಗೆ ಬರುತ್ತಿದೆ.

ಪಾರ್ಟಿ ವೇರ್ ನಿಂದ ಹಿಡಿದು ಕ್ಯಾಶುವಲ್ , ಆಫೀಸ್ ವೇರ್ ಗಳವರೆಗೆ ಎಲ್ಲ ಬಗೆಯ ಬಟ್ಟೆ, ಶೂ, ಬ್ಯೂಟಿ ಪ್ರಾಡಕ್ಟ್ ಗಳನ್ನು ಜನರು ಖರೀದಿಸುತ್ತಿದ್ದಾರೆ. ಆದರೆ ಅವರ ಖರೀದಿ ಪಟ್ಟಿಯಲ್ಲಿ ಒಳಉಡುಪುಗಳು ಸೇರಿಲ್ಲ.

ಇದರಿಂದ ಒಳ ಉಡುಪು ಕಂಪನಿಗಳಾದ ಜಾಕಿ, ಡಾಲರ್, ರೂಪಾ ಸಂಸ್ಥೆಗಳ ಮಾರಾಟ ಕುಸಿದಿದೆ. ಹಬ್ಬ ಹರಿದಿನಗಳಲ್ಲಿ ಶಾಪಿಂಗ್ ಮತ್ತು ಫ್ಯಾಷನ್ ಉಡುಪುಗಳ ಮಾರಾಟ ಹೆಚ್ಚಿದ್ದರೂ ಒಳಉಡುಪುಗಳ ಮಾರಾಟ ಹೆಚ್ಚಿರಲಿಲ್ಲ. ಮಕ್ಕಳು, ಮಹಿಳೆಯರು ಮತ್ತು ಪುರುಷರ ಎಲ್ಲಾ ವರ್ಗಗಳಲ್ಲೂ, ಈ ಬಟ್ಟೆಗಳ ಮಾರಾಟವು ಅತ್ಯಲ್ಪವಾಗಿದೆ.

ಹಾಗಾದರೆ ಭಾರತದ ಜನರು ಇನ್ನು ಮುಂದೆ ಒಳ ಉಡುಪುಗಳನ್ನು ಖರೀದಿಸುವುದಿಲ್ಲವೇ? ಇದರ ಹಿಂದಿನ ಕಾರಣವನ್ನು ತಿಳಿಯೋಣ ಬನ್ನಿ.

ಭಾರತದಲ್ಲಿ ಹಣದುಬ್ಬರ ಎಷ್ಟು ಹೆಚ್ಚಾಗಿದೆ ಎಂದರೆ ಜನರು ತಮ್ಮ ಒಳಉಡುಪುಗಳನ್ನು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಡಿಸೆಂಬರ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಳ ಉಡುಪುಗಳ ಬಳಕೆ ಶೇಕಡಾ 55ರಷ್ಟು ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಮಾರಾಟ 7.5ರಷ್ಟು ಕಡಿಮೆಯಾಗಿದೆ.

ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಜನರ ಬಳಿ ಖರ್ಚು ಮಾಡಲು ಸಾಕಷ್ಟು ಹಣ ಉಳಿಯುತ್ತಿಲ್ಲ, ಇದು ಮಾರಾಟದಲ್ಲಿ ಇಳಿಕೆಗೆ ಕಾರಣವಾಗಿರಬಹುದು. ಅಲ್ಲದೆ ಭಾರತೀಯರು ಆನ್ ಲೈನ್ ಮಾರ್ಕೆಟಿಂಗ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆನ್‌ಲೈನ್ ಸ್ಟೋರ್‌ಗಳು ಹೆಚ್ಚಿನ ರಿಯಾಯಿತಿಗಳನ್ನು ನೀಡುವುದು ಇದಕ್ಕೆ ಕಾರಣ. ಅದೇ ಸಮಯದಲ್ಲಿ, ಮಲ್ಟಿ ಬ್ರಾಂಡ್ ಔಟ್‌ಲೆಟ್‌ಗಳು (ಎಂಬಿಒ) ಹಿಂದಿನಷ್ಟು ಸಂಗ್ರಹವನ್ನು ಖರೀದಿಸುತ್ತಿಲ್ಲ ಎಂದು ಸ್ಥಳೀಯ ಅಂಗಡಿಗಳವರು ಹೇಳುತ್ತಾರೆ. ಅಂಗಡಿಯವರು ಖರೀದಿಸಿದ ವಸ್ತುಗಳಿಗೆ ಹಣ ಪಾವತಿಯನ್ನೂ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಉತ್ಪಾದಕರ ದುಡಿಯುವ ಬಂಡವಾಳಕ್ಕೂ ತೊಂದರೆಯಾಗಿದೆ.

ಜಾಕಿ, ಲಕ್ಸ್ ಇಂಡಸ್ಟ್ರೀಸ್‌ನ ಮೂಲ ಕಂಪನಿಯಾದ ಪೇಜ್ ಇಂಡಸ್ಟ್ರೀಸ್, ಡಿಸೆಂಬರ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವ್ಯವಹಾರದಲ್ಲಿ ಕುಸಿತವನ್ನು ವರದಿ ಮಾಡಿದೆ. ಆದರೆ ರೂಪಾ & ಕಂ. ವ್ಯವಹಾರದಲ್ಲಿ 52ರಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವರದಿ ಮಾಡಿದೆ. ಕಳೆದ ಒಂದೂವರೆ ವರ್ಷದಲ್ಲಿ ರೂಪಾ ಷೇರುಗಳು ಶೇಕಡಾ 52ಕ್ಕಿಂತ ಹೆಚ್ಚು ಕುಸಿದಿವೆ.

ಪೇಜ್ ಇಂಡಸ್ಟ್ರೀಸ್ ವಾಲ್ಯೂಮ್ 11 ಶೇಕಡಾ ಕಡಿಮೆಯಾಗಿದೆ. ಷೇರಿನ ಬೆಲೆಯು ಐದು ಪ್ರತಿಶತದಷ್ಟು ಕುಸಿದಿದೆ. ಒಳ ಉಡುಪುಗಳ ಮಾರಾಟ ಕುಸಿಯುತ್ತಿರುವುದು ಆರ್ಥಿಕ ಮಾರುಕಟ್ಟೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದರ ಸೂಚನೆಯಾಗಿದೆ. ಜಾಕಿ ಒಳ ಉಡುಪುಗಳನ್ನು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮಾರುಕಟ್ಟೆಯಲ್ಲಿ ಕಂಡುಬರುವ ಕುಸಿತವು ಮುಂದಿನ ಎಲ್ಲಾ ಮಾರುಕಟ್ಟೆಗಳ ಕುಸಿತದ ಮುನ್ಸೂಚನೆಯಾಗಿದೆ.

ಮೊದಲಿಗೆ ಒಳ ಉಡುಪು ಖರೀದಿಯನ್ನು ಮುಂದೂಡುವ ಮಧ್ಯಮವರ್ಗ ನಿಧಾನವಾಗಿ ಒಂದೊಂದೇ ಖರೀದಿಯನ್ನು ಮುಂದೂಡಲು ಆರಂಭಿಸುತ್ತದೆ ಮತ್ತು ಇದರೊಂದಿಗೆ ಮಾರುಕಟ್ಟೆಯ ಕುಸಿತ ಆರಂಭಗೊಳ್ಳುತ್ತದೆ. ಹೀಗಾಗಿ ಈ ಒಳ ಉಡುಪು ಮಾರಾಟದಲ್ಲಿನ ಕುಸಿತ ಭವಿಷ್ಯದ ದೃಷ್ಟಿಯಿಂದ ಒ‍ಳ್ಳೆಯದಲ್ಲ ಎನ್ನುತ್ತಿದ್ದಾರೆ ತಜ್ಞರು.

ಭಾರತದಲ್ಲಿ ಒಳಉಡುಪು ಮಾರುಕಟ್ಟೆಯು $5.8 ಬಿಲಿಯನ್ ಅಥವಾ ರೂ. 48,123 ಕೋಟಿ ಎಂದು ಅಂದಾಜಿಸಲಾಗಿದೆ. ಪುರುಷರು ಮತ್ತು ಮಹಿಳೆಯರ ವಿಭಾಗಗಳಿಂದ ಒಳ ಉಡುಪುಗಳ ಮಾರುಕಟ್ಟೆಗೆ ಒಟ್ಟು ಕೊಡುಗೆ ಕೊಡುಗೆ 39 ಪ್ರತಿಶತ ಮತ್ತು 61 ಪ್ರತಿಶತ.

Related Articles

ಇತ್ತೀಚಿನ ಸುದ್ದಿಗಳು