Home ರಾಜ್ಯ ಚಿಕ್ಕಬಳ್ಳಾಪುರ ಜನ ತೀರ್ಮಾನವೇ ನಿಜವಾದ ಪ್ರಜಾಪ್ರಭುತ್ವ

ಜನ ತೀರ್ಮಾನವೇ ನಿಜವಾದ ಪ್ರಜಾಪ್ರಭುತ್ವ

0

ಚಿಕ್ಕಬಳ್ಳಾಪುರ: ನಿಜ ಪ್ರಜಾಪ್ರಭುತ್ವ ಗ್ರಾಮ ಪಂಚಾಯತ್ ಕಾನೂನಿನಲ್ಲಿದೆ. ಅದು ಜನ ತೀರ್ಮಾನ ಮೂಲಕ ಸಾಧ್ಯ ಎಂದು ಶನಿವಾರದಂದು ಜಿಲ್ಲೆಯ ಕೋನಪಲ್ಲಿ ಗ್ರಾಮ ಪಂಚಾಯತ್ ಧನಮಿಟ್ಟೆನಹಳ್ಳಿಯಲ್ಲಿ ನಡೆದ ನಿವೇಶನ ಒದಗಿಸುವ ವಿಶೇಷ ಗ್ರಾಮ ಸಭೆಯಲ್ಲಿ ಶಶಿರಾಜ್ ಹರತಲೆ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಜನ ಮತ ಹಾಕುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಷ್ಟೆ ಅಲ್ಲದೆ ಸ್ಥಳಿಯ ಸರ್ಕಾರಗಳಾದ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್ ನ ಸದಸ್ಯರುಗಳನ್ನು ಆಯ್ಕೆ ಮಾಡ್ತಾರೆ.  ಗ್ರಾಮ ಪಂಚಾಯತಿ ಹೊರತು ಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳಲ್ಲಿ ಅನುಷ್ಟಾನಿಸಬಹುದಾದ ಕಾರ್ಯಗಳು ಮತ್ತು ಅವುಗಳಿಗೆ ಅನುಮೋದನೆಯನ್ನು ಅಲ್ಲಿನ ಜನ ಪ್ರತಿನಿಧಿಗಳು ಮಾಡುತ್ತಾರೆ. ಅದರೆ ಗ್ರಾಮ ಪಂಚಾಯತ್ ಆಡಳಿತದಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳನ್ನು ಜನ ಆಯ್ಕೆ ಮಾಡ್ತಾರೆ ಅದಕ್ಕೆ ಅನುಮೋದನೆಯನ್ನು ಕೂಡ ಗ್ರಾಮ ಸಭೆ ಮೂಲಕ ಜನರೇ ನೀಡ್ತಾರೆ. ಹಾಗಾಗಿ ನಿಜವಾದ ಪ್ರಜಾಪ್ರಭುತ್ವ ದ ಬಳಕೆ ಗ್ರಾಮ ಪಂಚಾಯತ್ ಗಳಲ್ಲಿ ಆಗುತ್ತದೆ. ಅದನ್ನು ಜನ ಅರಿತು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಬಂದ ನಂತರವೂ ಹಳ್ಳಿ ಆಡಳಿತ ಕಟ್ಟೆ ಪಂಚಾಯತಿ ಮೂಲಕ ನಡೆಯೋದು ವಂಶಪಾರಂಪರ್ಯವಾಗಿ ಮೇಲ್ವರ್ಗದ ಶ್ರಿಮಂತ ಕುಟುಂಬಗಳ 5  ಜನರು ಮಾತ್ರ  ನ್ಯಾಯ ಪಂಚಾಯತ್ ಮಾಡೋರು ಅಸ್ಪೃಶ್ಯರು, ಮಹಿಳೆಯರು, ಅಲ್ಲಿಗೆ ಹೋಗುವ ಹಾಗೆ ಇರಲಿಲ್ಲ. ಹಿಂದುಳಿದ ಸಮುದಾಯದವರೂ  ಹೋದರು ತೀರ್ಮಾನಿಸುವ ಹಕ್ಕಿರಲಿಲ್ಲ. ಆದರೆ ಸಂವಿಧಾನದ ಅಡಿಯಲ್ಲಿ ರಚಿತವಾದ ಕಾನೂನು ಪಂಚಾಯತ್ ನಲ್ಲಿ ಮಹಿಳೆಯರಿಗೆ 50% ರಾಜಕೀಯ ಮಿಸಾಲಾತಿ ನೀಡಲಾಗಿದ್ದು, ಈಗ ಪುರಷರಷ್ಟೆ ಮಹಿಳೆರು ಕೂಡ ಚುನಾಯಿತರಾಗುತ್ತಿದ್ದಾರೆ. ಪರಿಶಿಷ್ಟ ವರ್ಗ ಮತ್ತು ಪಂಗಡ ಹಾಗೂ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಲಾಗಿದ್ದು ಅವರು ಕೂಡ ಸದಸ್ಯರಾಗಿ ಅಧ್ಯಕ್ಷರಾಗಿ ಉಪಾಧ್ಯಕ್ಷ ರಾಗುತ್ತಿರುವುದನ್ನು ನೋಡಬಹುದು. ಅದಕ್ಕಾಗಿಯೇ ಇದನ್ನು ಗ್ರಾಮ ಸರ್ಕಾರ ಅಂತ ಕರೆಯಲಾಗತ್ತೆ. ಹಾಗಾಗಿ ವ್ಯಕ್ತಿ ನಾಯಕತ್ವಕ್ಕೆ ಮನ್ನಣೆ ನೀಡದೆ ಜನ ನಾಯಕತ್ವವನ್ನು ಎತ್ತಿಡಿಯುವಲ್ಲಿ ಇಂತಹ ಗ್ರಾಮ ಸಭೆ ಸಾಗಬೇಕು. ಕಳೆದ ಹತ್ತು ವರ್ಷಗಳ ಜನರ ಹಕ್ಕೊತ್ತಾಯಕ್ಕೆ  ಈ ದಿನ ಮನೆ ಮತ್ತು ನಿವೇಶನ ರಹಿತ 25 ಕುಟುಂಬಗಳಿಗೆ ಜನ ಸಹಭಾಗಿತ್ವದಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ  ಗ್ರಾಮ ಸಭೆಯ ಮಹತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ತಿಳಿಸಿದರು. ಅಷ್ಟೆ ಅಲ್ಲದೆ ನಿವೇಶನ ಮತ್ತು ಮನೆ ವಂಚಿತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅವರಿಗೂ ಕೂಡಲೆ ನಿವೇಶನ ಮತ್ತು ಮನೆ ನೀಡಲು ಗ್ರಾಮ ಪಂಚಾಯತ್ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ ಮಾತನಾಡಿ, ʼನನ್ನ ಅವಧಿ ಇರುವುದರೊಳಗೆ ನನ್ನ ಗ್ರಾಮ ಪಂಚಾಯತಿ ಯಲ್ಲಿ ಇರುವ ಎಲ್ಲಾ ಬಡವರಿಗೂ ನಿವೇಶನ ಮತ್ತು ಮನೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆರೋಗ್ಯ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದು, ಅವರ ಸಹಕಾರ, ಬೆಂಬಲ ಪಡೆದು ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂದು ಮಾತನಾಡಿದ್ದಾರೆ.

ಈ ಸಂಧರ್ಭದಲ್ಲಿ ಪಿ.ಡಿ.ಓ ಪ್ರತಿಭಾ, ಕಾರ್ಯದರ್ಶಿ ಚಲಪತಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಗಿರೀಶ್, ಸುಧಾಕರ್, ಸುವರ್ಣ, ವೆಂಕಟೇಶಪ್ಪ, ಮಾಜಿ ಸದಸ್ಯರಾದ ಡಿ.ಸಿ ವೆಂಕಟೇಶಪ್ಪ, ಆಶೋಕ ಕರವಸೂಲಿಗಾರ ನಾಗರಾಜ್, ಕಾಯಕ ಮಿತ್ರ ಸಾವಿತ್ರಮ್ಮ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

You cannot copy content of this page

Exit mobile version