Home ದೇಶ ಪೆಟ್ರೋಲ್ ಸುಂಕ ಕಡಿತ ಕಂಪನಿಗಳ ಪಾಲು: ಸಾಮಾನ್ಯ ಜನರಿಗೆ ಚುನಾವಣೆಗಳ ನಂತರ ಬೆಲೆಯೇರಿಕೆ ಬರೆ ಬೀಳುವ...

ಪೆಟ್ರೋಲ್ ಸುಂಕ ಕಡಿತ ಕಂಪನಿಗಳ ಪಾಲು: ಸಾಮಾನ್ಯ ಜನರಿಗೆ ಚುನಾವಣೆಗಳ ನಂತರ ಬೆಲೆಯೇರಿಕೆ ಬರೆ ಬೀಳುವ ಸಾಧ್ಯತೆ

0

ಸರ್ಕಾರದ ಅಧಿಕೃತ ಆದೇಶದ ಪ್ರಕಾರ, ಈ ಸುಂಕ ಕಡಿತವು ಕೇವಲ ಪೆಟ್ರೋಲ್ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ, ಪೆಟ್ರೋಲ್ ಬಂಕ್‌ಗಳಲ್ಲಿ ಸಾಮಾನ್ಯ ಜನರು ಖರೀದಿಸುವ ಇಂಧನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಶುಕ್ರವಾರ ಬೆಳಿಗ್ಗೆ ಹೊರಡಿಸಲಾದ ಆದೇಶದ ಮೊದಲ ಭಾಗದಲ್ಲಿ 10 ರೂಪಾಯಿ ಸುಂಕ ಕಡಿತದ ವಿಷಯವಿದ್ದಿದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಬೆಲೆ ಕಡಿಮೆಯಾಗಲಿದೆ ಎಂಬ ಸುದ್ಧಿ ಹಬ್ಬಿತ್ತು. ಆದರೆ, ಆದೇಶದ ಮುಂದಿನ ಭಾಗದಲ್ಲಿ ಇದು ಕಂಪನಿಗಳಿಗೆ ಮಾತ್ರ ಎಂದು ತಿಳಿದುಬಂದ ನಂತರ ಸಾರ್ವಜನಿಕರಲ್ಲಿ ತೀವ್ರ ನಿರಾಶೆ ಉಂಟಾಯಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ತಿಂಗಳಲ್ಲಿ ಬ್ಯಾರೆಲ್‌ಗೆ 70 ಡಾಲರ್‌ನಿಂದ 122 ಡಾಲರ್‌ಗೆ ಏರಿಕೆಯಾಗಿದೆ. ಇದರಿಂದಾಗಿ ತೈಲ ಕಂಪನಿಗಳು ದಿನಕ್ಕೆ ಸುಮಾರು 2,400 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿವೆ ಎಂದು ಪೆಟ್ರೋಲಿಯಂ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸದ್ಯಕ್ಕೆ ಐದು ರಾಜ್ಯಗಳ ಚುನಾವಣೆ ಇರುವುದರಿಂದ ಗ್ರಾಹಕರ ಮೇಲೆ ನೇರ ಹೊರೆ ಹಾಕಿಲ್ಲವಾದರೂ, ಚುನಾವಣಾ ಫಲಿತಾಂಶದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಶೇ. 20 ರಿಂದ 50 ರಷ್ಟು ಹೆಚ್ಚಾಗಿವೆ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

You cannot copy content of this page

Exit mobile version