Home ವಿದೇಶ ಪೆಟ್ರೋಲ್ ಟ್ಯಾಂಕರ್‌ ಪಲ್ಟಿ: 100ಕ್ಕೂ ಹೆಚ್ಚು ಸಾವು

ಪೆಟ್ರೋಲ್ ಟ್ಯಾಂಕರ್‌ ಪಲ್ಟಿ: 100ಕ್ಕೂ ಹೆಚ್ಚು ಸಾವು

0

ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್‌ ಪಲ್ಟಿಯಾಗಿ 100ಕ್ಕೂ ಹೆಚ್ಚು ಜನರು ಮರಣಿಸಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಅಪಘಾತಗೊಂಡಿದ್ದ ವಾಹನದಿಂದ ಇಂಧನವನ್ನು ಸಂಗ್ರಹಿಸಲು ಜನರು ಗುಂಪು ಧಾವಿಸಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬುಜಾ ವಿಶ್ವವಿದ್ಯಾನಿಲಯದ ಸಮೀಪ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್‌ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಜಿಗಾವಾ ರಾಜ್ಯದ ಮಜಿಯಾ ಪಟ್ಟಣದಲ್ಲಿ ಮಧ್ಯರಾತ್ರಿ ಅಪಘಾತಕೀಡಾಗಿದೆ ಎಂದು ಪೊಲೀಸ್‌‍ ವಕ್ತಾರ ಲಾವನ್‌ ಆಡಮ್‌ ತಿಳಿಸಿದ್ದಾರೆ.

ಆಫ್ರಿಕಾದ ಅತ್ಯಂತ ಜನನಿಬಿಡ ದೇಶವಾದ ನೈಜೀರಿಯಾದಲ್ಲಿ ಮಾರಣಾಂತಿಕ ಟ್ಯಾಂಕರ್‌ ಅಪಘಾತಗಳು ಸಾಮಾನ್ಯವಾಗಿದೆ, ಅಲ್ಲಿ ಅನೇಕ ಸ್ಥಳಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿಲ್ಲ ಮತ್ತು ಸರಕುಗಳನ್ನು ಸಾಗಿಸಲು ಸಮರ್ಥ ರೈಲ್ವೆ ವ್ಯವಸ್ಥೆಯಂತಹ ಪರ್ಯಾಯಗಳ ಕೊರತೆಯಿದೆ. ‌

ಇಂತಹ ಅಪಘಾತಗಳ ನಂತರ ಜನರು ಇಂಧನವನ್ನು ತುಂಬಿಸಿಕೊಳ್ಳಲು ಹಿಂಡು ಹಿಂಡಾಗಿ ಒಗ್ಗೂಡುವುದು ಕೂಡ ಸಾಮಾನ್ಯವಾಗಿದೆ, ವಿಶೇಷವಾಗಿ ನೈಜೀರಿಯಾದಲ್ಲಿ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ.

ಅಪಘಾತದ ಬಗ್ಗೆ ಕೇಳಿದ ಸ್ಥಳೀಯ ನಿವಾಸಿಗಳು ಘಟನಾ ಸ್ಥಳಕ್ಕೆ ಧಾವಿಸಿ ಇಂಧನವನ್ನು ತುಂಬಿಸಿಕೊಳ್ಳಲು ನೂಕುನುಗ್ಗಲು ಆರಂಭಿಸುತ್ತಿದ್ದ ಸ್ವಲ್ಪ ಹೊತ್ತಿನಲ್ಲೇ ಸ್ಫೋಟ ಸಂಭವಿಸಿ ಸಾವು ನೋವಿನ ಘಟನೆಗೆ ಕಾರಣವಾಯಿತು.

ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ವ್ಯಾಪಿಸಿರುವ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಘಟನಾ ಸ್ಥಳದಲ್ಲಿ ಶವದ ರಾಶಿ ಬಿದ್ದಿರುವುದಾಗಿ ವರದಿಗಳು ಹೇಳಿವೆ.

You cannot copy content of this page

Exit mobile version