Friday, June 14, 2024

ಸತ್ಯ | ನ್ಯಾಯ |ಧರ್ಮ

ಪಿಎಫ್‌ಐ ಬ್ಯಾನ್‌ ಕುರಿತು ಕಾಂಗ್ರೆಸ್‌ ಪ್ರತಿಕ್ರಿಯೆ

ಬೆಂಗಳೂರು: ದೇಶದಲ್ಲಿ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿರುವ ಕ್ರಮವನ್ನು ಕುರಿತು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೇ ಬಂದಿದೆ. PFI ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ, ಸಾಮರಸ್ಯ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಹೇಳಿದೆ.

ಇನ್ನು ಕಾಂಗ್ರೆಸ್‌ ಹಿರಿಯ ಮುಖಂಡ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಈ ಕುರಿತು ಪ್ರತಿಕ್ರಿಯಿಸಿದ್ದು, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಸಂಸ್ಥೆಗಳು ಹಿಂದು,‌ ಮುಸ್ಲಿಮ್ ಯಾರದ್ದೇ ಆಗಿರಲಿ ಮುಲಾಜಿಲ್ಲದೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತಲೇ ಬಂದಿದ್ದನ್ನು ಪುನರುಚ್ಚರಿಸುತ್ತೇನೆ. ಜಾತಿ, ಧರ್ಮಗಳ ಆಧಾರದ ಪಕ್ಷಪಾತ, ಪೂರ್ವಗ್ರಹಗಳಿಂದ ಸರ್ಕಾರ ವರ್ತಿಸಬಾರದು ಎನ್ನುವುದಷ್ಟೇ ನನ್ನ ಸಲಹೆ ಎಂದು ಹೇಳಿದರು.

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನೂ ಓದಿ: ಒಂದಕ್ಕಿಂತಲೂ ಹೆಚ್ಚು ಬ್ಯಾಂಕ್‌ ಹೊಂದಿದ್ದೀರಾ? ಹಾಗಿದ್ದರೆ ಇದನ್ನು ಓದಿ!

ಒಂದು ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡುವುದು ಎಷ್ಟು ಸುಲಭವೋ ಅದನ್ನು ನಿರ್ವಹಿಸುವುದು ಅಷ್ಟೇ ಕಷ್ಟದ ಕೆಲಸ. ಯಾವುದೇ ವ್ಯಾಪಾರಿ ಉತ್ಪನ್ನ ನಿಮಗೆ ಉಚಿತವಾಗಿ ಸಿಗುವುದಿಲ್ಲ. ಅಷ್ಟಕ್ಕೂ ಲಾಭವಿಲ್ಲದೆ ಯಾರು ವ್ಯಾಪಾರ ಮಾಡುತ್ತಾರೆ ಹೇಳಿ?

https://peepalmedia.com/2022/09/disadvantages-of-having-multiple-savings-accounts/

Related Articles

ಇತ್ತೀಚಿನ ಸುದ್ದಿಗಳು