ಮಂಗಳೂರು: ನಗರದ ಪಿಎಫ್ಐ, ಎಸ್ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ಎನ್ಐಎ ಅಧಿಕಾರಿಗಳ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಕೆಲಸಕ್ಕೆ ಕೆಲವರು ಅಡ್ಡಿಪಡಿಸಲು ಪ್ರಯತ್ನಿಸಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸದ್ಯಕ್ಕೆ ನಗರದಲ್ಲಿನ PFI, SDPI ಕಚೇರಿ ಇರುವ ನೆಲ್ಲಿಕಾಯಿ ರಸ್ತೆಯ ಎರಡು ಬದಿಗಳಲ್ಲೂ ಸಿಆರ್ಪಿಎಫ್ ಪಡೆಗಳು ಬಂದೋಬಸ್ತ್ ಮಾಡಿದ್ದಾರೆ.
SDPI ಕಚೇರಿ ಹಾಗೂ SDPI ಜಿಲ್ಲಾ ಘಟಕದ ಪ್ರಮುಖರ ಮನೆ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.