Friday, June 14, 2024

ಸತ್ಯ | ನ್ಯಾಯ |ಧರ್ಮ

ಫೋಟೋ ಸಿನೆಮಾ ಮಾರ್ಚ್ 15 ರಂದು ತೆರೆಗೆ: ಪ್ರಕಾಶ್‌ ರಾಜ್‌

ಬೆಂಗಳೂರು: ಕಳೆದ ವರ್ಷದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ‘ಫೋಟೋ’ ಸಿನಿಮಾ ಮಾರ್ಚ್‌ 15ರಂದು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ನಿರ್ದಿಗಂತ ಸಂಸ್ಥೆಯ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ ಎಂದು ಪ್ರಕಾಶ್‌ ರಾಜ್‌ ತಿಳಿಸಿದರು.
21 ವರ್ಷದ ಯುವಕ ಉತ್ಸವ್ ಗೋನವಾರ ಅವರ ‘ಫೋಟೋ’ ಸಿನಿಮಾವನ್ನು ಬುಧವಾರ ಶ್ರೀರಂಗಪಟ್ಟಣ ಸಮೀಪವಿರುವ ಪ್ರಕಾಶ್ ರಾಜ್ ಅವರ ʼನಿರ್ದಿಗಂತʼದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಡಾಲಿ ಧನಂಜಯ ಹಾಗೂ ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದರು.
‘ನಮ್ಮ ದೇಹಕ್ಕೆ ಆದ ಗಾಯಗಳು ನಾವು ಸುಮ್ಮನಿದ್ದರೂ ವಾಸಿಯಾಗುತ್ತವೆ. ಆದರೆ ಸಮಾಜಕ್ಕೆ ಆಗಿರುವ ಗಾಯ ನಾವು ಸುಮ್ಮನಿದಷ್ಟು ಜಾಸ್ತಿಯಾಗುತ್ತದೆ. ನನಗೆ ಉತ್ಸವ್ ಸಿನಿಮಾವನ್ನು ತೋರಿಸುವ ಆಸೆ ಬಹಳ ದಿನಗಳಿಂದ ಇತ್ತು. ಲಾಕ್‌ಡೌನ್‌ನಲ್ಲಿ ನೋಡಿದ ನೋವುಗಳನ್ನು ದಾಖಲೆ ಮಾಡಬೇಕು ಎಂದು 21 ವರ್ಷದ ಹುಡುಗನಿಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು. ನಮಗಂತೂ ಇಂಥ ಚಿತ್ರ ಮಾಡಲು ಆಗಲಿಲ್ಲ. ಈ ಚಿತ್ರಕ್ಕೆ ಬೆಂಬಲವಾಗಿ ನಿಲ್ಲೋಣ ಎಂದು ಇದನ್ನು ಬಿಡುಗಡೆ ಮಾಡಲು ಬೆಂಬಲಿಸುತ್ತಿದ್ದೇವೆ. ‘ಫೋಟೋ’ ಪ್ಯಾನ್‌ ವರ್ಲ್ಡ್‌ ಸಿನಿಮಾ ಆಗಲಿದೆ’ ಎಂದು ಪ್ರಕಾಶ್‌ ರಾಜ್‌ ಹೇಳಿದರು.
ಚಿತ್ರ ನಿರ್ದೇಶಕ ಉತ್ಸವ್ ಮಾತನಾಡಿ, ‘ಲಾಕ್‌ಡೌನ್‌ಗೂ ಮುನ್ನ ಕೊಡಗಿಗೆ ಹೋಗಿದ್ದೆ. ಆ ಸಮಯದಲ್ಲೊಂದು ಲೇಖನ ಓದಿದ್ದೆ. ಗಂಗಮ್ಮ ಎಂಬ ಗರ್ಭಿಣಿ ಬೆಂಗಳೂರಿನಿಂದ ಊರಿಗೆ ಹೋಗಬೇಕಾದರೆ ಮಧ್ಯದಲ್ಲಿ ಬಹುಅಂಗಾಂಗ ವೈಫಲ್ಯದಿಂದ ನಿಧನ ಹೊಂದುತ್ತಾರೆ. ಇದು ನನ್ನನ್ನು ಬಹಳವಾಗಿ ಕಾಡಿತು. ಈ ವಿಷಯ ದಾಖಲೆಯಾಗಬೇಕು ಎಂದು ಅನಿಸಿತು. ಆಗ ಕಥೆ ಬರೆಯಲು ಶುರು ಮಾಡಿದೆ. ಆ ನಂತರ ಅದನ್ನು ಸಿನಿಮಾ ಮಾಡಿದೇವು. ಎಂದು ಸಿನಿಮಾ ಕಥಾಹಂದರದ ಕುರಿತು ವಿವರಿಸಿದರು.

Related Articles

ಇತ್ತೀಚಿನ ಸುದ್ದಿಗಳು