Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಿಐಬಿ ಎಚ್ಚರಿಕೆ

ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಿಐಬಿ ಎಚ್ಚರಿಕೆ

0

ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ. 

ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ. 

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ ಸುದ್ದಿಗಳ ಕುರಿತು #PIBFactCheck ಗೆ ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದೆ.

ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗುವ ಲಕ್ಷಣಗಳಿವೆ. ಆದ್ದರಿಂದ  ಯಾವುದೇ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಮುಖ್ಯ ಎಂದು ಪಿಐಬಿ ತಿಳಿಸಿದೆ.

ಇಂಥಹ ಸುದ್ದಿಗಳ ಬಗ್ಗೆ ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. Email:  factcheck@pib.gov.in ಅಥವಾ  91 8799711259 ನಂಬರ್‌ ಗೆ ತಿಳಿಸುವಂತೆ ಕೋರಿದೆ.

You cannot copy content of this page

Exit mobile version